ಮೋಹ
ದೇಹ ಬುದ್ಧಿ ಬೆಳೆದ ಪ್ರಾಣಿಗಳು ತನ್ನ ಅಪ್ಪ-ಅಮ್ಮ ಯಾರೆಂಬುದನ್ನು ಮರೆತು ಬಿಟ್ಟು ಹೋಗುವುದು ಸಹಜ, ಪ್ರಕೃತಿ ನಿಯಮ ಹಾಗೂ ಅದೇ ಧರ್ಮ. ಆದರೆ ಮನುಷ್ಯ ಎಂಬ "ಸಾಮಾಜಿಕ ಪ್ರಾಣಿ"ಯೂ "ನಮ್ಮವರು-ತಮ್ಮವರು" ಎಂಬ "ತನ್ನತನ"ದ ಭಾವನೆಯನ್ನೇ ಮರೆಯುತ್ತಾ ಅದನ್ನು ಹಂತ ಹಂತವಾಗಿ ಕೊಲ್ಲುತ್ತಾ, ತನ್ನ ಬಂಧು -ಬಳಗವನೆಲ್ಲ ದೂರ ಮಾಡಿ "ನಾನು - ನನ್ನ ಹೆತ್ತವರು ನನ್ನ ಮಡದಿ ಮಕ್ಕಳು" ಎಂದು ಅವಿಭಾಜ್ಯ ಕುಟುಂಬ ಸಂಸ್ಕಾರಕ್ಕೆ ತಿಲಾಂಜಲಿ ಹಾಡಿದ. ಹಳೆ ಪದ್ಧತಿಗಳಿಗೆ ಸಂಸ್ಕಾರ ಮಾಡಿದ ಮೇಲೆ ಬಹುಶಃ ಅದು ಮಜಾ ನೀಡಿರಬೇಕು. ಪುನಃ "ನಾನು - ನನ್ನ ಹೆತ್ತವರು ನನ್ನ ಮಡದಿ ಮಕ್ಕಳು" ಎಂಬ ಹೊಸ ಅವತಾರಕ್ಕೆ ಸಂಸ್ಕಾರ ಮಾಡಲು ಮುಂದಾದ ಅವನು ಇನ್ನು ಅದು "ಕೆಲಸ (ಕಾಯ೯) ಪ್ರಗತಿಯಲ್ಲಿದೆ ". ಈ ಕಾಯ೯ ಪೂಣ೯ ಗೊಂಡರೆ ಹೊಸ ಅವತಾರದ ಉಗಮ- ಅದುವೇ "ನಾನು - ನನ್ನ ಮಡದಿ ಮಕ್ಕಳು". ಈ ಹೊಸ ಅವತಾರವನ್ನು ಅನೇಕರು ಈಗಾಗಲೆ ತಾಳಿದ್ದಾರೆ. ಕೆಲವರಂತು ಹೊಸ ಅವತಾರ ತಾಳಲಾರದೆ ಹಾಳೆ ಅವತಾರಕ್ಕೆ ಸಂಸ್ಕಾರ ಮಾಡಲಾರದೆ ಒದ್ದಾಡುತ್ತಿದ್ದಾರೆ.
ಹೀಗೆ ಮುಂದುವರೆದರೆ ಮುಂದೊಂದು ದಿನ "ನಾನು ನಮ್ಮನೆಯಲ್ಲಿ - ನನ್ನ ಮಡದಿ ಅವಳ ಮನೆಯಲ್ಲಿ (ತವರು ಮನೆಯಂತು ಅಲ್ಲ) - ನಮ್ಮಕ್ಕಳು WHO CARES? " ಎಂಬ ಸಂಸ್ಕೃತಿ ಬಂದರೂ ಅತಿಶಯೋಕ್ತಿಯಲ್ಲ. ಆ ದಿನ ಎಂದೂ ಬಾರದಿರಲಿ.
ಕಾರಣವೇನು?
ಎಂದು ಮಡತಿ ಮಕ್ಕಳ ಮೇಲಿನ ಮೋಹ ಅತಿ ಅಗುತ್ತದೊ ಅಂದು ಹೆತ್ತವರ ಮೇಲಿನ ಪ್ರೀತಿ ಇಂಚಿ ಇಂಚಾಗಿ ಸಾಯುತ್ತಾ ಬರುತ್ತದೆ. ಮಡದಿ ಮಕ್ಕಳನ್ನು ಮೋಹಿಸೋದು ತಪ್ಪಲ್ಲ ಅಪರಾಧವೂ ಅಲ್ಲ. ಆದರೆ ಅದು ಹೆತ್ತವರ ಮೇಲಿನ ಪ್ರೀತಿಗೆ ಮಾರಕವಾಗದಿರಲಿ. ಅದು ಹೆತ್ತವರ ಮೇಲಿನ ಗೌರವಕ್ಕೆ ಅಡ್ಡಿಯಾಗದಿರಲಿ. ಅದು ಹೆತ್ತವರ ಸೇವೆಗೆ ತಡೆಯಾಗದಿರಲಿ. ಕೊನೆಗೆ ಅದು "ಹೆತ್ತವರ ನಮೂಂದಿಗೆ ಅಥಾವ ನಾವು ಹೆತ್ತವರೊಂದಿಗೆ ಇರುವುದೇ ಬೇಡ" ಎನ್ನುವ ಮಟ್ಟಕ್ಕೆ ತರದಿರಲಿ.
ಅಜ್ಜ-ಅಜ್ಜಿ, ಅತ್ತೆ-ಮಾಮ, ಚಿಕ್ಕಪ್ಪ-ಚಿಕ್ಕಮ್ಮ, ದೊಡಪ್ಪ-ದೊಡ್ಡಮ್ಮ, ದಾಯಾದಿಗಳೆಲ್ಲ ವಿಭಕ್ತ ಕುಟುಂಬ ಸಂಸ್ಕೃತಿಯಂಬ ಗೋರಿಯೊಳಗೆ ಮಣ್ಣಲ್ಲಿ ಮಣ್ಣಾಗಿದ್ದಾರೆ. ತಂದೆ-ತಾಯಿ ಈ ಗೋರಿ ಸೇರದಿರಲಿ ಎಂಬ ಆಶಯದೊಂದಿಗೆ
ಜೋಗಿ ಬಿ ಮಹೇಶ್
Comments
Post a Comment