ಗಾಂಧಿ, ದೇಶ ಮತ್ತು ಮಧ್ಯ

ಪ್ರಿಯ ಓದುಗ ಮಿತ್ರರೇ,


ನಾನು ಕುಡಿಯುವುದಿಲ್ಲ. ಹಾಗೆಂದು ಕುಡಿಯುವವರನ್ನು ದೂಷಿಸುವುದಿಲ್ಲ. ಮಧ್ಯಸೇವನೆ ವೈಯಕ್ತಿಕ ವಿಚಾರ. It's individuals choice. ಆದರೆ ದೇಶದಲ್ಲಿ ಏನು ನಡೆಯುತ್ತಿದೆ, ಯಾಕೆ ನಡೆಯುತ್ತಿದೆ, ದೇಶವನ್ನು ಸರ್ಕಾರಗಳು ಹೇಗೆ ನಡೆಸುತ್ತಿವೆ, ನಮ್ಮ ಸೈನ್ಯ ಸೈನಿಕರು ಚೆನ್ನಾಗಿದ್ದಾರೆಯೇ, ದೇಶ ಸುಭಿಕ್ಷವಾಗಿದೆಯೇ, Is there any threat to the Nation? ಎನ್ನುವ ಹತ್ತು ಹಲವು ವಿಷಯ ವೈಯಕ್ತಿಕವೂ ಹೌದು ಒಬ್ಬ ಸತ್ಪ್ರಜೆಯ ಕರ್ತವ್ಯವೂ ಹೌದು. ಸರ್ಕಾರಗಳು ಆಡಳಿತವನ್ನು ಮಾಡಲು ಅರ್ಥಾತ್ ದೇಶ ನಡೆಸಲು ಹಣ ಬೇಕು. ಸಾಕಷ್ಟು ಹಣ ಬೇಕು. ಅದರಲ್ಲೂ ಮಾಂಸವನ್ನು ತಿಂದು ಬಿಸಾಡಿದ ಮೂಳೆಯಂತ್ತಿದ್ದ (ಆರ್ಥಿಕವಾಗಿ) ೧೯೪೭ರ ಭಾರತದಂತಹ ಹೊಸದಾಗಿ ಜನಿಸಿದ ದೇಶವನ್ನು ನಡೆಸಲು ಬೇಕಾದಷ್ಟು ಹಣ ಬೇಕಾಗಿತ್ತು. ಹಣವನ್ನು ಎಲ್ಲಿಂದ ತರುವುದು? ಹಣದ ಗಿಡ ನೆಡೊಣವೆಂದರೆ ನಮ್ಮ ನಸಿಬಿಗೆ ಅಂತಹ ಗಿಡವೇ ಇಲ್ಲ. ಸಾಲ ಮಾಡೋಣವೆಂದರೆ ಎಷ್ಟು ಸಾಲ ಮಾಡುತ್ತೀರಿ? ಒಂದಿಷ್ಟು ಮಾಡಿದರು ಒಂದಲ್ಲ ಒಂದು ದಿನ ಬಡ್ಡಿ ಸಮೇತ ತೀರಿಸಬೇಕು. ಸಮಸ್ಯೆಗೆ ಸಿಕ್ಕ ಉತ್ತರ "Taxation"

ಸುಂಕ ಕಟ್ಟುವುದು, ಸುಂಕ ಪಡೆಯುವುದು/ವಸೂಲು ಮಾಡುವುದು/ ದೋಚುವುದು ಹಿಂದೂಸ್ಥಾನಕ್ಕೇನೂ ಹೊಸದಲ್ಲ. ಬ್ರಿಟಿಷರು ದೋಚುವ ನೂರಾರು ವರ್ಷಗಳ ಹಿಂದೆಯೇ ಮೊಗಲರು, ಸುಲ್ತಾನರು, ಖಿಲ್ಜಿ ಯರು ವಸೂಲಿ ಮಾಡುತ್ತಿದ್ದರು. ಇವರುಗಳ ವಸೂಲಾತಿಯ ಕಾಲಕ್ಕೂ ಮುಂಚೆಯೇ ಪಲ್ಲವರು, ಪಾಂಡ್ಯರು, ಚಾಲುಕ್ಯರು, ರಾಷ್ಟ್ರಕೂಟರು ಸುಂಕ ಪಡೆಯುತ್ತಿದ್ದರು. ಈಗ ನವ ಭಾರತದಲ್ಲಿ ಸುಂಕ-ಟ್ಯಾಕ್ಸ್ ನ ವಿಚಾರದಲ್ಲಿ ಸರಕಾರವು ಯಾವುದರಿಂದ ಎಷ್ಟು ಪ್ರಮಾಣದಲ್ಲಿ Tax ಪಡೆಯುತ್ತಿದೆ ಎನ್ನುವುದನ್ನು ಗಮನಿಸಬೇಕು. ಈ Taxation ಗಳು ಜನರ ಹಾಗೂ ದೇಶದ ಒಳಿತಿಗಾಗಿ ಹಾಗೂ ದೇಶ ಮತ್ತು ದೇಶವಾಸಿಗಳ ಏಳಿಗೆಗೆ ಪೂರಕವಾಗಿರಬೇಕು. ಪ್ರಸ್ತುತ ದೇಶದ ಆರ್ಥಿಕತೆಯು ಶಿರಸಾಸನ ಹಾಕಿದೆ. ಹೀಗಿರುವಾಗ ತೈಲಗಳ ಮೇಲಿನ ವಿಪರೀತ ಟ್ಯಾಕ್ಸ್ ನ ಪರಿಣಾಮವಾಗಿ ತೈಲಗಳ ಬೆಲೆ ದೇಶದಲ್ಲಿ ಹೆಚ್ಚುತ್ತಲೇ ಇದೆ. ದೇಶದ ಹಿತದೃಷ್ಟಿಯಿಂದ ಇದು ಸರಿಯಾದರೂ ದೇಶದ middle-class ಮಂದಿಯ ಪಾಡೇನು?

ಪೆಟ್ರೋಲ್ ಡೀಸೆಲ್ ಒಂದರ ಬೆಲೆ ಜಾಸ್ತಿ ಆದರೆ ಸಾಕು ಉಳಿದೆಲ್ಲ ಹಾಲು ಮೊಸರು ತರಕಾರಿ ದಿನಸಿ ಬೆಲೆಗಳು ಆಕಾಶ ನೋಡುತ್ತವೆ. ಅಂತೆಯೇ ಲಿಕ್ಕರ್ ಟ್ಯಾಕ್ಸ್ ನ ವಿಷಯದಲ್ಲಿ ಸರ್ಕಾರಗಳು (May it be State or Central) ದೇಶ ನಡೆಸಲು ದೇಶದ ಜನರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದೆ. ದೇಶದ ಆರ್ಥಿಕತೆಯ ಸ್ವಾತಂತ್ರ ನಂತರ ದಿಂದಲೂ ಮಧ್ಯದ ಮೇಲೆ for unfortunate reasons ಗಣನೀಯವಾಗಿ ಅವಲಂಬಿಯಾಗಿದೆ. ರಾಜ್ಯ ಸರ್ಕಾರಗಳು ನಾಗರಿಕರ ಸಾಂಸಾರಿಕ ಜೀವನದ ಅರಿವೇ ಇಲ್ಲದಂತೆ ಅಗತ್ಯಕ್ಕಿಂತ ಹೆಚ್ಚು ಮದ್ಯದಂಗಡಿಗಳಿಗೆ license ಗಳನ್ನು ನೀಡಿ ಬೊಕ್ಕಸ ತುಂಬಿಸಿಕೊಳ್ಳುತ್ತಿವೆ. ಇದರ ಕುರಿತು ನನಗೆ ಅಸಮಾಧಾನವಿದೆ. ಇದೊಂದಕ್ಕೆಯಲ್ಲ, ಅಕ್ರಮ-ಸಕ್ರಮ ಗಳಂಥ ಇನ್ನೂ ಕೆಲವು ಬೇಡದ ದಾರಿಯಲ್ಲಿ ಬೊಕ್ಕಸ ತುಂಬಿಸಿಕೊಳ್ಳುವುದರ ಬಗ್ಗೆ ನನ್ನ ಆಕ್ಷೇಪವೂ ಇದೆ. ಇರಲಿ. ವಿಷಯಕ್ಕೆ ಬರೋಣ. ನಾನು ಮೊದಲೇ ಹೇಳಿದಂತೆ ಕುಡಿಯುವುದು ವೈಯಕ್ತಿಕ ವಿಚಾರ. ಗಂಡಸರೇ ಯಾಕೆ, ಇಂದಿನ ಹೆಂಗಸರು ಮೈಚಳಿಬಿಟ್ಟು ಕುಡಿಯುತ್ತಾರೆ ಕುಣಿಯುತ್ತಾರೆ. ಅದೂ ರಾಜರೋಷವಾಗಿ. ತಪ್ಪಿಲ್ಲ ಬಿಡಿ. I'm not here to judge them. But what am I trying to say? ಮಧ್ಯದ Availability ಕಡಿಮೆಯಾಗಬೇಕು. ಊಟದಲ್ಲಿ ಉಪ್ಪಿನಕಾಯಿ ಇದ್ದಂತೆ ದೇಶದಲ್ಲಿ ಮಧ್ಯ ದೊರೆಯಬೇಕು. ಈಗಿನ ದಿನಗಳಲ್ಲಿ ಊಟದಲ್ಲಿ ಉಪ್ಪಿದಂತೆ ಯಾವ ನಗರಕ್ಕೆ ಹೋದರು ಯಾವ ಕುಗ್ರಾಮಕ್ಕೆ ಕಾಲಿಟ್ಟರೂ We get liquor. A fine quality liquor. ಇದು ಸಾಧ್ಯವಾಗಿರುವುದು "ಲಿಕ್ಕರ್ ಟ್ಯಾಕ್ಸ್" ಉದ್ದೇಶ ಉಳ್ಳ ಸರ್ಕಾರಗಳಿಂದ. ಇದು ಆದಷ್ಟು ಬೇಗ ಉತ್ತಮ ರೀತಿಯಲ್ಲಿ ಬದಲಾಗಬೇಕು. ನಾನು ಹೇಳುತ್ತಿರುವುದು ರಾಕೆಟ್ ಸೈನ್ಸೊ ಅಥವಾ ಮ್ಯೂಸಿಕ್ ನೋಟ್ಸೊ ಅಲ್ಲ. ಅಥವಾ ಯಾರಿಗೂ ತಿಳಿಯದ ವಿಷಯವೇನಲ್ಲ. ಕೆಲವರಿಗೆ ಗೊತ್ತು. ಕೆಲವರಿಗೆ ಗೊತ್ತಿಲ್ಲ. ಇನ್ನು ಕೆಲವರಿಗೆ ಬೇಕಾಗಿಲ್ಲ. ಅದುವೇ ಈ ಸಂಚಿಕೆಯ ಮುಖ್ಯ ವಿಷಯ

ಗಾಂಧಿ, ದೇಶ ಮತ್ತು ಮಧ್ಯ

ನಿಮ್ಮವ

ಮಹೇಶ್ ಜೋಗಿ

ಗಾಂಧಿ, ದೇಶ ಮತ್ತು ಮಧ್ಯ

ನೇತಾಜಿ ಸುಭಾಷ್ ಚಂದ್ರಬೋಸ್ 1944ರ ತಮ್ಮ ಆಕಾಶವಾಣಿ ಸಂದೇಶದಲ್ಲಿ ಮಹಾತ್ಮ ಗಾಂಧಿಯವರನ್ನು ಮೊಟ್ಟಮೊದಲ ಬಾರಿಗೆ "ರಾಷ್ಟ್ರಪಿತ" ಎಂದು ಸಂಬೋಧಿಸಿದರು. ನಂತರದ ದಿನಗಳಲ್ಲಿ "ರಾಷ್ಟ್ರಪಿತ" ಎಂಬ ಪಟ್ಟ ಗಾಂಧೀಜಿಯವರ ಜೊತೆಯಲ್ಲಿ ಶಾಶ್ವತವಾಗಿ ಉಳಿಯಿತು. ಗಾಂಧೀಜಿಯವರು ಸಮಾಜಕ್ಕೆ ಅವಶ್ಯಕತೆಯಿದ್ದ ನೀತಿಪಾಠ, ಮಾರ್ಗದರ್ಶನಗಳನ್ನು ಮಾಡುತ್ತಿದ್ದರು. ಅಂತಯೇ ಅವರು ವೇದ-ಪುರಾಣ, ಭಗವದ್ಗೀತ, ರಾಮಾಯಣ-ಮಹಾಭಾರತದಂತಹ ಧರ್ಮ ಗ್ರಂಥಗಳಿಂದ ಸಂಪಾದಿಸಿದ ಜ್ಞಾನದ ಫಲವಾಗಿ ಹೇಳುತ್ತಿದ್ದ ನೀತಿ ಪಾಠಗಳನ್ನು ಹಾಗೂ ಮಾರ್ಗದರ್ಶನಗಳನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಂಡಿದ್ದರು. "ನಮ್ಮ ಊಟ ನಾವೇ ಬೇಯಿಸಿಕೊಳ್ಳಬೇಕು, ನಮ್ಮ ಬಟ್ಟೆಗಳನ್ನು ನಾವೇ ನೋಯಬೇಕು, ನಮ್ಮ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು, ನಮ್ಮ ಅವಶ್ಯಕತೆಗಳನ್ನು ನಾವೇ ಪೂರೈಸಿಕೊಳ್ಳಬೇಕು" ಎಂದು ನೀತಿ ಪಾಠ ಮಾಡುತ್ತಿದ್ದ "ಮಹಾತ್ಮ" ತಮ್ಮ ಜೀವನದ ಅನುದಿನವೂ ಅಂತೆಯೇ ನಡೆದರು. ಚಾಚಾ ನೆಹರೂಗೆ "ಕುಡಿತ ಬೇಡ" ಎಂದು ಮಾರ್ಗದರ್ಶನ ಮಾಡುತ್ತಿದ್ದ ಗಾಂಧೀಜಿ ಎಂದಿಗೂ ಮಧ್ಯವನ್ನು ಸೇರಿಸಲಿಲ್ಲ. ಆದರೆ ಚಾಚಾ ತೆಗೆದುಕೊಂಡು ಕೆಲವು ನಿರ್ಧಾರಗಳಿಂದ ಇಂದು ದೇಶದ ಆಡಳಿತವು ರಾಷ್ಟ್ರಪಿತನ ಮಾತುಗಳನ್ನು ನಿರ್ಲಜ್ಜದಿಂದ ಪಕ್ಕಕ್ಕೆ ಇಟ್ಟು ದೇಶ ನಡೆಸಬೇಕಾಗಿದೆ ಸರ್ಕಾರಗಳು. ರಾಜ್ಯಭಾರ ಮಾಡಲು ರಾಜ್ಯ ನಡೆಸಲು ಅಬಕಾರಿ ಇಲಾಖೆಯ ಮೇಲೆ ಅಂದರೆ ಲಿಕ್ಕರ್ ಟ್ಯಾಕ್ಸ್ ಮೇಲೆ ದಿನೇದಿನೇ ಹೆಚ್ಚು ಅವಲಂಬಿ ಯಾಗುತ್ತಿದೆ ಆಡಳಿತ ವ್ಯವಸ್ಥೆ. ದೇಶ ಬೆಳೆದಂತೆ ಒಂದಿಂಚೂ ಭೂಮಿ ಇಲ್ಲದ ಆಳುಗಳು, ಒಂದಿಷ್ಟು ವ್ಯವಸಾಯದ ಭೂಮಿ ಇದ್ದರೂ ವ್ಯವಸಾಯ ಮಾಡುವ ಮನಸ್ಸಿಲ್ಲದ ಜನಗಳು, ಹೊಲಗದ್ದೆಗಳಲ್ಲಿ ಉಳುವುದನ್ನು ಬಿಟ್ಟು ಪಟ್ಟಣಗಳನ್ನು ಸೇರಿ ಕೂಲಿ-ನಾಲಿ ಮಾಡಲಾರಂಭಿಸಿದರು. ವ್ಯವಸಾಯದ ಶ್ರಮವೇ ಬೇರೆ, ಕೂಲಿಯ ಶ್ರಮವೇ ಬೇರೆ. ಸೂರ್ಯದೇವ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗೊವಷ್ಟೂ ಸಮಯ ದುಡಿಯುವ ಈ ಶ್ರಮಜೀವಿಗಳು ದಿನಪೂರ್ತಿ ದುಡಿದ ಪರಿಣಾಮವಾಗಿ ಕಾಣಿಸಿಕೊಳ್ಳುವ ಮೈನೋವನ್ನು ವಾಸಿ ಮಾಡಿಕೊಳ್ಳಲು ಅದೇ ದುಡಿತದ ಫಲವಾಗಿ ಬಂದ ಪಗಾರವನ್ನು ಮಧ್ಯದಂಗಡಿಯ ಗಲ್ಲಾಪೆಟ್ಟಿಗೆಗೆ ಸುರಿದು ತಮ್ಮ ಹೊಟ್ಟೆಗೆ ಮಧ್ಯ ಸುರಿದುಕೊಂಡು ಮಹಾನಗರಗಳ ಚಿಕ್ಕ ಗುಡಿಸಲುಗಳಲ್ಲಿನ ತಮ್ಮ ಹೆಂಡತಿ ಮಕ್ಕಳ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕುತ್ತಾರೆ. ಇದನ್ನು ನೋಡುವ ಧೃತರಾಷ್ಟ್ರ ನಂತಹ ಸರ್ಕಾರ ಜೀವ-ಜೀವನ ಎರಡು ಮುಖ್ಯವೆಂದು ಜೀವಕ್ಕೆ ಕುತ್ತು ಬಾರದಿರಲೆಂದು ಅಬಕಾರಿ ಇಲಾಖೆಯನ್ನು ಸ್ಥಾಪಿಸಿ ಗುಣಮಟ್ಟದ ಮದ್ಯವನ್ನೇ ಕುಡಿಯಲು ಪ್ರೇರೇಪಿಸುತ್ತದೆ. ಹಾಗೆ ಜೀವನ ನಡೆಸಲು ಅಂದರೆ ರಾಜ್ಯ ನಡೆಸಲು ಅದೇ ಮಧ್ಯದಿಂದ ದಿನೇದಿನೇ ಹೆಚ್ಚೆಚ್ಚು ತೆರಿಗೆಯನ್ನು ವಸೂಲಿ ಮಾಡುತ್ತಿದೆ. ಕುಡುಕನ ಜೀವನ-ಸಂಸಾರದ ವಿಷಯ ಯಾರಿಗೆ ಬೇಕು ಸ್ವಾಮಿ? ಅಬಕಾರಿ ಇಲಾಖೆಯು ಶಿಸ್ತು, ಪ್ರಾಮಾಣಿಕತೆ, ನೈತಿಕತೆ ಹಾಗೂ ಸಾಮಾಜಿಕ ಬದ್ಧತೆಯನ್ನು ಒಳಗೊಂಡಿರುವ ಒಂದು ಅದ್ಭುತ ಇಲಾಖೆ. ಆದರೆ ಅವರೇ ಕಾಳುಗಳಲ್ಲಿ ಹುಳಗಳಿದಂತೆ ಇಲಾಖೆಯೊಳಗೆ ಪ್ರಚಂಡ ಪರಾಕ್ರಮಿ ಭ್ರಷ್ಟರೂ ಇದ್ದಾರೆ. ಹುಳ ಗಳಿದ್ದರೆ ತೊಂದರೆ ಇಲ್ಲ ಆದರೆ ಕಾಳೆಲ್ಲಾ ಹುಳಗಳಿಂದಲೇ ತುಂಬಿದ್ದರೆ ಸಮಸ್ಯೆ. ಕುಡಿತವನ್ನು ವಿರೋಧಿಸುತ್ತಿದ್ದ


ಗಾಂಧೀಜಿಯನ್ನು "ರಾಷ್ಟ್ರಪಿತ" ಎಂದು ಸ್ವೀಕರಿಸಿರುವ ನಾವುಗಳು ಅಂದರೆ ಸಮಾಜ, ವ್ಯವಸ್ಥೆ, ಸರ್ಕಾರಗಳು ಮಹಾತ್ಮನ ಮಾತುಗಳನ್ನು ಏಕೆ ಕಡೆಗಣಿಸುತ್ತಿದ್ದೇವೆ? ಬಾಪೂವಿನ ಮಾತುಗಳು ಈ ದಿನಕ್ಕೆ ಅಪ್ರಸ್ತುತವಾಗಿವೆಯೇ? ಗಾಂಧಿಮಹಾತ್ಮನ ಕೆಲವು ಸಿದ್ಧಾಂತಗಳು ಇಂದಿಗೆ ಅಪ್ರಸ್ತುತವಾಗಿದೆ/ ವಾಗಿರಬಹುದು. ಆದರೆ ಕುಡಿತದ ವಿಚಾರದಲ್ಲಿ ಬಾಪೂವಿನ ಮಾತು ಇಂದಿಗೂ ನಾಳೆಗೂ ಸತ್ಯ. ಆದರೆ ಒಬ್ಬ ಮನುಷ್ಯ ಕುಡಿತವನ್ನು ಬಿಡುವ ಪ್ರಯತ್ನ ಮಾಡಿದಷ್ಟೂ ಸಹ ಪ್ರಯತ್ನ ವನ್ನು ಸರ್ಕಾರಗಳು ಸಂಪತ್ತಿಗಾಗಿ ಮಧ್ಯದ ತೆರಿಗೆ ಮೇಲೆ ತನ್ನ ಅವಲಂಬನೆಯನ್ನು ಕಡೆಪಕ್ಷ ಕಡಿಮೆ ಮಾಡಿಕೊಳ್ಳುವಲ್ಲಿಯಾದರೂ ಪ್ರಯತ್ನ ಮಾಡುತ್ತಿಲ್ಲ ಯಾಕೆ?

"ನಾನು ಭಾರತದ ಪ್ರಧಾನಿಯಾಗಿ ಒಂದು ಗಂಟೆಗೆ ನಿಯುಕ್ತನಾಗುವುದಾದರೆ ಈ ದೇಶದಿಂದ ಮಧ್ಯವನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ಮೊದಲ ಆದ್ಯತೆಯನ್ನು ನೀಡುತ್ತೇನೆ."

ಮಹಾತ್ಮಾಗಾಂಧಿ (೧೯೩೧, ಯಂಗ್ ಇಂಡಿಯಾ ಪತ್ರಿಕೆಯಲ್ಲಿ)

Comments