ಜೀವನದ ಸಣ್ಣಪುಟ್ಟ ಸಂತೋಷಗಳು
दिन गुज़र गए
हम किधर गए
ಪಿಯೂಷ್ ಮಿಶ್ರ ರವರ ಶಾಯರಿಯ ಸಾಲುಗಳು.
ಜೀವನದ ಸಣ್ಣಪುಟ್ಟ ಸಂತೋಷಗಳ ಬಗ್ಗೆ ಒಂದಾದರ ಮೇಲೊಂದಂತೆ ಭಾಷಣಗಳನ್ನು ಬಿಗಿಯುತ್ತಾ ಹೋಗಬಹುದು. ಪುಟ ಪುಟಗಟ್ಟಲೆ ಬರೆಯಬಹುದು. ಪುಂಖಾನುಪುಂಖವಾಗಿ ಇನ್ನೊಬ್ಬರಿಗೆ ಬುದ್ಧಿ ಹೇಳಬಹುದು. ಆದರೆ ಆ ಸಣ್ಣ ಪುಟ್ಟ ಸಂತೋಷಗಳನ್ನು ನಾವೇ ನಮ್ಮ ಜೀವನದಲ್ಲಿ ಅನುಭವಿಸದೆ ಇದ್ದರೆ ಏನು ಪ್ರಯೋಜನ. ಬಾಲ್ಯದಲ್ಲಿ ನಾವು ಕೊಳ್ಳುತ್ತಿದ್ದ ಜೀರಿಗೆ ಪೇಪರ್ಮೆಂಟ್ ನಮಗೆ ಆಗ ಕೊಡುತ್ತಿದ್ದ ಸಂತೋಷ, ಖುಷಿ, ಆನಂದ ಈಗ ಕೊಡುತ್ತಿಲ್ಲ. ಅದೇ ಪೆಪ್ಪರ್ಮೆಂಟ್, ಅದೇ ಅಂಗಡಿ, ಅದೇ ಚಾಚಾ ಎಲ್ಲವೂ ಅದೇ ಆದರೆ ನಾವುಗಳು ಮಾತ್ರ ಬೆಳೆದು ನಿಂತೆವು. ನಮ್ಮ ಮನಸ್ಥಿತಿ ಬದಲಾಯಿತು. ಪರಿಣಾಮ ನಮ್ಮ ದೃಷ್ಟಿಗೆ ಆಲ್ಮೋಸ್ಟ್ ಎಲ್ಲವೂ ಬದಲಾಯಿತು. ಚಿಕ್ಕವರಿದ್ದಾಗ ಅರ್ಧ ಮುಕ್ಕಾಲು ತಾಸಿನ ಕಾರ್ಟೂನ್ ನಲ್ಲಿ ಸಿಗುತ್ತಿದ್ದ ಸುಖ ಇವತ್ತು ದಿನಪೂರ್ತಿ Netflix ನೋಡಿದರೂ ಸಿಗುತ್ತಿಲ್ಲ. ದಿನಗಳು ಉರುಳುತ್ತಾ ಇದ್ದಹಾಗೆ ನಾವುಗಳು ಎಲ್ಲಿ ಕಳೆದುಹೋದೆವೊ ಗೊತ್ತಿಲ್ಲ.
ನನ್ನದೇ ವಾಟ್ಸಪ್ ಸ್ಟೇಟಸ್ ನಲ್ಲಿ ನನ್ನದೇ ಜನರಿಗೆ ನನ್ನ ಫೋಟೋ ತೋರಿಸೋಕೆ ಮನಸ್ಸು ಹತ್ತಾರುಬಾರಿ ಯೋಚಿಸುತ್ತದೆ. "ಮಂದಿ ಏನು ತಿಳಿದಾರೊ" "ಸುಮ್ಮನೆ ಅವರಿಗೇಕೆ ನನ್ನ ಮುಖ ನೋಡುವ ತೊಂದರೆ" ಹೀಗೆ ಬೆಳೆದು ನಿಂತ ಮನಸ್ಸು ಪದೇ ಪದೇ ಯೋಚಿಸಿ ಸೋಷಿಯಲ್ ಮೀಡಿಯಾಗಳ ಸಣ್ಣಪುಟ್ಟ ವಿಚಾರಕ್ಕೂ "Confidence gather" ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆಂದ ಮಾತ್ರಕ್ಕೆ ಸಂತೋಷವೇ ಇಲ್ಲವೆಂದಲ್ಲ. ಭಗವಂತನ ಕೃಪೆಯಿಂದ ಜೀವನದಲ್ಲಿ ಸುಖ ಸಂತೋಷದಿಂದ ಇದ್ದೇನೆ. ಬಾಳಲ್ಲಿ ಆನಂದವಿದೆ. ಸಣ್ಣಪುಟ್ಟ ಸಂತೋಷಗಳು ಸಹ ಎತೇಚ್ಛವಾಗಿಯೇ ಇದೆ. ಆದರೆ ಆ ಸಂತೋಷ ಗಳನ್ನು ನಾಲ್ಕು ಜನರೊಂದಿಗೆ ಹಂಚಿಕೊಳ್ಳುವ ಧೈರ್ಯ ಬೇಕಲ್ಲಾ... ಅದು ಸ್ವಲ್ಪ ಕಮ್ಮಿ.
ಇಷ್ಟೆಲ್ಲ ಯಾಕೆ ಹೇಳ್ತಾ ಇದ್ದೀನಿ ಅಂದರೆ ನಮ್ಮ ಲೆಕ್ಚರರ್ ಒಬ್ಬರು ಇವತ್ತು ತಮ್ಮ ವಾಟ್ಸಪ್ ಸ್ಟೇಟಸ್ ನಲ್ಲಿ ಲಿಂಕ್ ಒಂದನ್ನು ಹಾಕಿದ್ದರು. ಏನೆಂದು ತೆರೆದು ನೋಡಿದರೆ ಅವರು ಹಾಡಿರುವ ಹಾಡು. ಅಣ್ಣಾವ್ರ "ಶಬ್ದವೇದಿ" ಚಿತ್ರದ ಹಾಡು ಹಾಡಿದ್ದರು. ವೈಯಕ್ತಿಕವಾಗಿ ನನಗೆ ಅವರ ಭಾವನೆಗಳು ಕಾಣಿಸಿತು. ನಮ್ಮ ಸರ್ ಒಳ್ಳೆ ವ್ಯಕ್ತಿ ಅಂತ ಗೊತ್ತಿತ್ತು. ಆದರೆ ಭಾವನಾಜೀವಿ ಹಾಗೂ ಒಳ್ಳೆಯ ಹಾಡುಗಾರರು ಎಂದು ಗೊತ್ತಿರಲಿಲ್ಲ. ಕೇಳಿ ಖುಷಿಯಾಯಿತು. ಸ್ಟಾರ್ ಮೇಕರ್ ಆಪ್ ಅಂತೆ, ಅದರಲ್ಲಿ ವೋಟಿಂಗ್. ನನಗೆ ಅಷ್ಟಾಗಿ ತಿಳಿಯದ ವಿಚಾರ ಆದರೂ ಡೌನ್ಲೋಡ್ ಮಾಡಿ ವೋಟ್ ಮಾಡಿದೆ. (ಸರ್ ಗೆ ವೋಟಿಗಾಗಿ ನೋಟು ಕೇಳುವ ಯೋಚನೆ ಇದೆ) it took around 5 to 6 minutes. "ನಮ್ಮವರು ಅದೇನೋ ಹೊಸದು ಮಾಡಿದ್ದಾರೆ" ಅನ್ನುವ ಖುಷಿ ನನ್ನಲ್ಲಿತ್ತು. ನಾನು ವೋಟ್ ಹಾಕಿ ನಮ್ಮ ಸರ್ ಎನೂ 'ಇಂಡಿಯಾ ಗಾಟ್ ಟ್ಯಾಲೆಂಟ್' ಗೆ ಸೆಲೆಕ್ಟ್ ಆಗುವುದಿಲ್ಲ. ಆದರೆ ಈ ಪಯಣದಲ್ಲಿ ಸಿಗುವ ಸಣ್ಣಪುಟ್ಟ ಸಂತೋಷಗಳೇ ನಮಗೆ ರುಚಿಸುವುದು. "ನಮ್ಮ ಸರ್ ಹಾಡಿದ್ದಾರೆ" ಎಂದು ನನಗೆ ಒಂದು ಹತ್ತು ಹದಿನೈದು ನಿಮಿಷ ಖುಷಿ ಕೊಟ್ಟಿತ್ತು ಎಂದರೆ ನಮ್ಮ ಸರ್ ಗೆ ಅವರ ಹಾಡು, ಆ ಪ್ರಯತ್ನ, ನಂತರ ಬಂದ ಪ್ರಶಂಸೆಗಳು ಎಷ್ಟು ಖುಷಿ ಕೊಟ್ಟಿರಬಹುದು. "ಅಯ್ಯೋ ಬಿಡು ಇದನ್ನು ಮಾಡಿದರೆ ಏನು ಸಿಗುತ್ತೆ?" "ಅಯ್ಯೋ ಜನ ಏನಂತಾರೋ" ಅಂತ ಕೂತರೆ ಇಂತಹ ಅನೇಕ ಸಣ್ಣಪುಟ್ಟ ಸಂತೋಷಗಳು ಹುಟ್ಟುವ ಮುನ್ನವೇ ಸತ್ತು ಹೋಗುತ್ತವೆ.
ಎಲ್ಲರ ಖುಷಿ ಹಾಡುವುದರಲ್ಲಿ ಇರುವುದಿಲ್ಲ. ಎಲ್ಲರ ಆನಂದ ಬರೆಯುವುದರಲ್ಲಿ ಇರುವುದಿಲ್ಲ. ಕೆಲವರಿಗೆ ಕುಣಿದರೆ ಖುಷಿ. ಇನ್ನೂ ಕೆಲವರಿಗೆ ಅಡುಗೆ ಮಾಡುವುದರಲ್ಲಿ ನೆಮ್ಮದಿ. ಆದರೆ ನೆನಪಿಡಿ ಕೇಳುಗರೆ ಇಲ್ಲದೆ, ಓದುಗರೇ ಇಲ್ಲದೆ, ನೋಡುಗರೆ ಇಲ್ಲದೆ, ತಿನ್ನುವವರೇ ಇಲ್ಲದೇ ಹೋದರೆ ಇವೆಲ್ಲವೂ ಅರ್ಧ ಖುಷಿಯನ್ನು ಮಾತ್ರ ಕೊಡಬಲ್ಲವು. ಆದರೆ ಪ್ರೇಕ್ಷಕರಿದ್ದೂ ಹಾಡು-ಕುಣಿತ ಬರಹಗಳು ಇಲ್ಲದಿದ್ದರೆ ಏನು ಪ್ರಯೋಜನವಿಲ್ಲ. ಹಾಗಾಗಿ ಪ್ರೀತಿಪಾತ್ರರಾದ ನನ್ನ ಓದುಗ ಮಿತ್ರರಾದ ನಿಮಗೆ ನನ್ನ ಸಲಹೆ ಇಷ್ಟೇ - ಪ್ರೇಕ್ಷಕರಿಲ್ಲದಿದ್ದರೂ ನಿಮಗೆ ಖುಷಿ ನೀಡುವ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಕಡೆ ಪಕ್ಷ ಅರ್ಧ ಸಂತೋಷವಾದರೂ ಸಿಗುತ್ತದೆ.
ನಿಮ್ಮವ
ಮಹೇಶ್ ಬಿ ಜೋಗಿ
ಅರ್ಥಪೂರ್ಣವಾದ ಸಾಲುಗಳು
ReplyDeleteಧನ್ಯವಾದಗಳು🙏
DeleteThank u so much mahesh..very meaning ful msg...heart touching lines.. keep on writing like this.good luck all the best👍😍
ReplyDeleteThank you, sir. Means a lot.
Deleteಸರಿ ಮಹೇಶ ಒಳ್ಳೆಯ ವಿಷಯ, ಏಷ್ಟೋ ಬಾರಿ ಇಂತಹ ಸಣ್ಣ ಖುಷಿಯನ್ನು ಆಸ್ವಾದಿಸುವುದೇ ಮರೆತುಬಿಡುತ್ತೇವೆ. ಒಳ್ಳೆಯ ಬರಹಗಾರ ನೀನು.
ReplyDelete