"ಪ್ರೀತಿ"

ಆಡಿ ತೋರಬಾರದು ಪ್ರೀತೀನ 
ತೋರದಂತೆ ಅದು ಇರೋದು
ತಂಗಾಳಿ ಹಾಗೆ
ಯು ಆರ್ ಅನಂತಮೂರ್ತಿಯವರ ಭಾವಾನುವಾದದ ಸಾಲುಗಳು.

ಪ್ರೀತಿ ಆಗೋದ ಅಥವಾ ಮಾಡೋದ? It depends. ನಮಗೆ ಇಷ್ಟ ಆಗುವ ಗುಣ, ಅಂದ ಚಂದ, ರೂಪ ಲಾವಣ್ಯಗಳಿದ್ದರೆ ಪ್ರೀತಿ ಅನ್ನೋದು ಆಗುತ್ತೆ. ಇಲ್ಲ ಬ್ಯಾಂಕ್ ಬ್ಯಾಲೆನ್ಸ್ ಆರೇಳು ಡಿಜಿಟ್ಸ್ ಇದ್ದರೆ ಆಗ ಪ್ರೀತಿ ಮಾಡೋದು (ನಟಿಸಲು ಅವಕಾಶ ಇದೆ). Jokes apart ಪ್ರೀತಿ ಅನ್ನೋದು ಕೇವಲ ಹೆಣ್ಣು ಗಂಡಿನ ನಡುವಿನ ಮಧುರ ಭಾವವಲ್ಲ. (ಹಾಗೆಂದು ಹೆಣ್ಣು-ಹೆಣ್ಣಿನ ಹಾಗೂ ಗಂಡು-ಗಂಡಿನ ಮಧ್ಯ ಹುಟ್ಟುವ ಆಕರ್ಷಣೆಗೂ "ಪ್ರೀತಿ" ಎನ್ನಬಹುದೆ? ಗೊತ್ತಿಲ್ಲ.) ನಮ್ಮೆಲ್ಲರಿಗೂ ತಿಳಿದಂತೆ ಪ್ರೀತಿ ಎನ್ನುವುದು ಅನೇಕ ರೂಪದಲ್ಲಿ ವ್ಯಕ್ತವಾಗುತ್ತದೆ. ತಾಯಿ-ಮಗುವಿನ ಮಧ್ಯ ಇರುವ ಪ್ರೀತಿಗೆ ಕರುಳಿನ ಸಂಬಂಧ ಎನ್ನುತ್ತೇವೆ, ತಂದೆ-ಮಕ್ಕಳ ನಡುವಿನ ಪ್ರೀತಿಗೆ ಮಮಕಾರ ಎಂದೂ, ಗೆಳೆಯರ ಮೇಲಿನ ಪ್ರೀತಿಗೆ ಸ್ನೇಹವೆಂದು, ದೇಶಭಕ್ತಿಯ ಪ್ರೀತಿಗೆ ರಾಷ್ಟ್ರೀಯತೆ ಎಂದು, ನಾಡ ಸೇವೆಯ ಪ್ರೀತಿಗೆ ನಾಡ ಪ್ರೇಮವೆಂದು ಹಾಗೂ ಬಂಧು-ಬಳಗಗಳ ಪ್ರೀತಿಗೆ ರೋದನೆ ಎಂದು ಪ್ರೀತಿಯನ್ನು ನಾನಾ ರೀತಿಯಲ್ಲಿ ಹೆಸರಿಸುತ್ತೇವೆ, ತೋರುತ್ತೇವೆ ಹಾಗೂ ಸವಿಯುತ್ತೇವೆ.


ಪ್ರೀತಿ ಕೇವಲ ಮನುಷ್ಯರ ಮೇಲಷ್ಟೇ ಆಗಬೇಕು ಅಥವಾ ಮಾಡಬೇಕು ಎಂದೇನೂ ಇಲ್ಲ. ಪ್ರಾಣಿ-ಪಕ್ಷಿಗಳನ್ನು ಪ್ರೀತಿಸಬಹುದು. ಗಿಡಮರಗಳನ್ನೂ ಪ್ರೀತಿಸಬಹುದು. ನದಿ ಸರೋವರಗಳನ್ನು ಕಾಡು ಬೆಟ್ಟಗುಡ್ಡಗಳನ್ನು ಒಟ್ಟಾರೆ ನಮ್ಮ ಸುತ್ತಲಿನ ಜೀವಸಂಕುಲವನ್ನೇ ಪ್ರೀತಿಸಬಹುದು. ಹಾ…. ಇಲ್ಲಿಯೂ ಕೂಡ ಪ್ರೀತಿ ಆಗಬಹುದು ಅಥವಾ ಮಾಡಬಹುದು. ಉದಾಹರಣೆಗೆ ನಮಗೆ ನಿಮಗೆಲ್ಲ ಪ್ರಾಣಿ-ಪಕ್ಷಿ ಪರಿಸರದ ಮೇಲೆ ಆಗೊಮ್ಮೆ-ಈಗೊಮ್ಮೆ ಪ್ರೀತಿಯಾಗಬಹುದು ಅಂದ್ರೆ ಪ್ರೀತಿ ಹುಟ್ಟಬಹುದು. ಆದರೆ ಕೆಲ ದೊಡ್ಡ ದೊಡ್ಡವರು ವಿಶೇಷವಾಗಿ ನಟ ಮಣಿಯರು ಹೋಳಿ, ದೀಪಾವಳಿ, ದಸರಾದಂತ ಹಬ್ಬಗಳ ಸಮಯಕ್ಕೆ ಸರಿಯಾಗಿ ಪ್ರಾಣಿಗಳ ಮೇಲೆ ಪಕ್ಷಿಗಳ ಮೇಲೆ ಪರಿಸರದ ಮೇಲೆ ಎಲ್ಲಿಲ್ಲದಂತೆ ಪ್ರೀತಿ ಮಾಡಲು ಶುರುಮಾಡಿ ಬಿಡುತ್ತಾರೆ. ವಿಚಿತ್ರವೇ ಸರಿ. ಇರಲಿ. ಪ್ರೀತಿ ಅನ್ನೋದೇ ಹಾಗೆ ಯಾರಿಗೂ ಹೇಳದೆ ಕೇಳದೆ ಟೈಮ್ ಸೆನ್ಸ್ ಮತ್ತು ಕಾಮನ್ ಸೆನ್ಸ್ ಇಲ್ಲದೆ ಆಗೋಗುತ್ತೆ.

ಪ್ರೀತಿ ಮಾಡೋದನ್ನ ಮತ್ತು Income tax returns file ಮಾಡೋದನ್ನ ಮರಿಬೇಡಿ.

ಪ್ರೀತಿ ಆಗೋದಾ ಮಾಡೋದಾ ಅನ್ನೋದ್ನ ಇನ್ನು ಸಿಂಪಲ್ಲಾಗಿ ಹೇಳಬೇಕಂದ್ರೆ ನನಗೆ ಶಿವಣ್ಣ ಅಂದರೆ ತುಂಬಾ ಇಷ್ಟ ಅರ್ಥಾತ್ ನನಗೆ ಶಿವಣ್ಣನ ಮೇಲೆ ಪ್ರೀತಿ ಆಗಿದೆ. ಈಗ ಶಿವಣ್ಣನ ಮೇಲೆ ಪ್ರೀತಿ ಆಗಿದೆ ಅಂತ ಶಿವಣ್ಣನ ಎಲ್ಲ ಸಿನಿಮಾಗಳ ಮೇಲೆ ನನಗೆ ಪ್ರೀತಿ ಆಗುತ್ತಾ? ಇಲ್ಲ, ಖಂಡಿತ ಇಲ್ಲ. ಆದರೆ ಶಿವಣ್ಣ ಎಂಥಾ ಸಿನಿಮಾ ಮಾಡಿದರು ಪ್ರೀತಿಯಿಂದ ಸ್ವೀಕರಿಸಿ ನೋಡುತ್ತೇನೆ. ಶಿವಣ್ಣನ ಸಿನಿಮಾಗಳನ್ನು ಪ್ರೀತಿ ಮಾಡೋದು ನಂತರದಲ್ಲಿ if the content is great/touching ಅದು ಇಷ್ಟ ಆಗಿ "ಪ್ರೀತಿ ಆಗೋಯ್ತು" ಅಂತ ಆಗಬಹುದು. ಅಂತೆಯೇ ನಮಗೆ ಜೀವನದಲ್ಲಿ ಯಾರ ಮೇಲಾದರೂ ಪ್ರೀತಿ ಆಗೋದ್ರೆ ಅವರ ನಡೆನುಡಿಗಳು, ಅವರು ಮಾಡುವ ಕೆಲಸಗಳನ್ನು, ಅವರು ಇಷ್ಟಪಡೋದನ್ನು ನಾವು ನಮಗೆ ಅರಿವಿಲ್ಲದಂತೆ ಪ್ರೀತಿ ಮಾಡಲಾರಂಭಿಸುತ್ತೇವೆ. ಹಾಗೆಂದು ಅವರ ನಡೆನುಡಿ ಕೆಲಸಗಳ ಮೇಲಿನ ನಮ್ಮ ಪ್ರೀತಿಯು ಕೊನೆತನಕ ಸಹಜವಾಗಿಯೇ ಇರುತ್ತದೆ ಎನ್ನುವುದು ತಪ್ಪು. It may gradually fade away. ಆದರೆ ಅವರ ಮೇಲೆ ಆಗಿರುವ ಪ್ರೀತಿ ಸಹಜವಾಗಿಯೇ ಶಾಶ್ವತವಾಗಿ ಉಳಿಯಬಹುದು ಬೆಳೆಯಬಹುದು.

ನಿಮ್ಮವ
ಮಹೇಶ್ ಬಿ ಜೋಗಿ

Comments

Post a Comment