ನಮ್ಮ ಮೆಟ್ರೋ
ज़िन्दगी एक
सफर है
सुहाना
यहाँ कल
क्या हो
किसने जाना
ಹಸರತ್
ಜೈಪುರಿ ಅವರ
ಸಾಲುಗಳು....
ನಮ್ಮ ಮೆಟ್ರೋ,
ಬೆಂಗಳೂರಿಗರಿಗೆ ಕೇವಲ
ರೈಲಲ್ಲ. ಅದು
ತಮ್ಮ ಜೀವನಶೈಲಿಯನ್ನೇ
ಬದಲಿಸಿದ ಮಾಯಾವಿ.
ವಿಜಯನಗರದಲ್ಲಿ ವಾಸವಿರುವ
ಶಿಲ್ಪಾ ತನ್ನ
ಪೀಣ್ಯ ಕಚೇರಿಗೆ
ಬಿಎಂಟಿಸಿಯಲ್ಲೋ
ಅಥವಾ ತನ್ನ
ಆಕ್ಟಿವಾದಲ್ಲೊ ಹೋದ್ರೆ
ಕನಿಷ್ಠ ಒಂದೂವರೆಯಿಂದ
ಎರಡು ತಾಸು
ಬೇಕು. ಅದೇ
ನಮ್ಮ ಮೆಟ್ರೋ
ಹತ್ತಿದರೆ just 20 to 25 minutes ಸಾಕು. ಅವನ್
ಮುಟ್ಟಿದಾ, ಇವಳ್
ನೂಕುದ್ಲು ತಳ್ಳುದ್ಲು
ಅನ್ನೊ ಗೊಳಿಲ್ಲ.
ಆ ಗುಂಡಿಗಳು,
ಈ unscientific ಹಂಪುಗಳು ಗಾಡಿ-ಬಾಡಿ ಎರಡನ್ನು
shape out ಮಾಡ್ತಾವೆ ಅನ್ನೊ
ಕಂಪ್ಲೇಂಟ್ ಗಳೂ
ಇಲ್ಲ. ಒಳ್ಳೆ
ಹ್ಯಾರಿಪಾಟರ್ ಥರ ಆಕಾಶದಲ್ಲಿ ಹಾರ್ಕೊಂಡು,
ಅಂಡರ್ ಗ್ರೌಂಡ್
ಅಲ್ಲಿ ಮಿಂಚಂಗೆ
ಓಡ್ಕೊಂಡು ಬೆಂಗಳೂರಿನ
ಒಂದು ತುದಿಯಿಂದ
ಮತ್ತೊಂದು ತುದಿಗೆ ಆರಾಮಾಗಿ ತಲುಪಬಹುದು
ಅದೂ with a reasonable costನಲ್ಲಿ.
ಇನ್ನು ನಮ್ಮ
ಮೆಟ್ರೊ ಕಾಮಗಾರಿ
ಶುರುವಾಗಿ ರಾಜ್ಯದ
ಮಾನ್ಯ ಮುಖ್ಯಮಂತ್ರಿಗಳು
ಬಂದು ನಮ್ಮ
ಮೆಟ್ರೊ ರೈಲಿಗೆ
ಹಸಿರು ಬಾವುಟ/ನಿಶಾನೆ ತೋರ್ಸೋವರೆಗೂ
ಬೆಂಗಳೂರು ಹಾಗೂ
ಬೆಂಗಳೂರಿಗರು ಸಹಿಸಿಕೊಂಡ
ಕಿರಿಕಿರಿ ಅಷ್ಟಿಷ್ಟಲ್ಲ.
ಕಾಮಗಾರಿ ಕಾರಣದಿಂದ
ಅರ್ಧಗಂಟೆ ದಾರಿ
ಮೂರು ತಾಸಿನ
ಮಹಾ ಪ್ರಯಾಸದ
ಪ್ರಯಾಣ ವಾದ
ಉದಾಹರಣೆಗಳೂ ಇವೆ.
ನಮ್ಮ ಮೆಟ್ರೋ
ಪಿಲ್ಲರ್ ಗಳಿಗೋಸ್ಕರ
ರಸ್ತೆಗಳನ್ನ drill ಮಾಡ್ತ ಮಾಡ್ತ
ಎಷ್ಟೋ ಮನೆಗಳ
water connection, sewage lineಗಳು damage ಆಗಿ ಜನ "ಅದೊಂದು ಕರ್ಮ"
ಅಂದಿದ್ದು ಇದೆ.
ಅಷ್ಟೇ ಅಲ್ಲ
ಎಷ್ಟೋ ಹಳೆ
ಪ್ರಾಪರ್ಟಿ ಗಳು
ಒಳ್ಳೆ ಪ್ರೈಸ್
ಗೆನೆ ಮೆಟ್ರೊ
ದಾರಿಗೆ ಸೇರಿದವು.
ಎಷ್ಟು ಹಳೆ-ಪಳೆ ಮನೆಗಳ ಗಟ್ಟಿಯಾಗಿದ್ದ
ತಳಪಾಯವನ್ನೇ ಅಲ್ಲಾಡಿಸಿ
ದ್ದಲ್ಲದೆ ನೀರಿನ
ವರಸೆಗಳನ್ನು ದಿಕ್ಕು
ತಪ್ಪಿಸಿತ್ತು. A good number of trees were
chopped off just like that in the name of development. ಬಿಡಿ, ಮರಗಳ
ಬಗ್ಗೆ ಯಾರು
ಮಾತಾಡ್ತಾರೆ. Who cares. ಈ ಮೆಟ್ರೋ ಕನ್ಸ್ಟ್ರಕ್ಷನ್
ಇದ್ದ ಕಡೆಯಲ್ಲ
ಮನೆಗಳಿಗೆ disturbance ಜಾಸ್ತಿ ಆಗ್ತಾ
ಇದ್ದವು. ಅಂಗಡಿಗಳಿಗೆ
ಬಿಸಿನೆಸ್ ಕಮ್ಮಿ,
almost nil. ಇಷ್ಟೆಲ್ಲಾ ದಾಟಿಕೊಂಡು
ಬಂದಿರೋ ಬೆಂಗಳೂರಿಗರಿಗೆ
"ನಮ್ಮ ಮೆಟ್ರೋ"
ಅನ್ನೋ ಸೌವಲತ್ತಿನ
ಸೌಭಾಗ್ಯ ಈಗ.
ಅಲ್ಲಿ ನಲ್ವತೈದರ
ಹೆಂಗಸು ತನ್ನ
ಚಿಕ್ಕ ಬ್ಯಾಗ್
ಒಳಗೆ ಕೈ
ಹಾಕಿ ಟಕ-ಟಕ ಅಂತ ಹೂ ಕಟ್ಟುತ್ತಾ ಇರ್ತಾಳೆ.
ಯಾರೋ ಇಪ್ಪತ್ತರ
ಕಾಲೇಜು ಹುಡುಗ
ಬೆನ್ನಿಗೆ ಬ್ಯಾಗ್ ನೇತಾಕೊಂಡು
ಕಿವಿಗೆ ಇಯರ್
ಫೋನ್ ತೂರುಸ್ಕೊಂಡು
ಅದ್ಯಾವುದೋ ಹಿಂದಿ
ಹಾಡಿನ ಗುಂಗಲಿರುತ್ತಾನೆ.
ಇನ್ಯಾರೋ ಸಾಫ್ಟ್ವೇರ್
ಕಂಪನಿಯಲ್ಲಿ ಕೆಲಸ
ಮಾಡೊ ಲೇಡಿ
"The Alchemist" ಪುಸ್ತಕ ಓದುತ್ತಾ
ಬೇರೊಂದು ಲೋಕದಲ್ಲೇ
ಮುಳುಗಿರುತ್ತಾಳೆ. ಹೈಸ್ಕೂಲ್
ಬಾಲಕಿಯರಿಬ್ಬರ ನೀಟಾಗಿ
ತಲೆಬಾಚಿ ಐರನ್
ಮಾಡಿರುವ ಹೊಳಪಿನ
ಬಿಳಿ ಸಮವಸ್ತ್ರ
ಧರಿಸಿ ಫಿಟ್
ಆಗಿರುವ ಬಿಳಿ
ಸಾಕ್ಸ್ ಗಳನ್ನು
ಮಂಡಿಯವರೆಗೂ ಏರಿಸಿಕೊಂಡು
ಪರ್ಫೆಕ್ಟ್ ವೈಟ್
ಶೂಸ್ ಗಳನ್ನು
ಹಾಕಿಕೊಂಡು ಶಿಸ್ತಾಗಿ
ಸ್ಕೂಲ್ ಬ್ಯಾಗ್
ಹಾಕ್ಕೊಂಡು ಕೈಯಲ್ಲಿ
ಒಂದು ಪುಸ್ತಕ
ಹಿಡುಕೊಂಡು Newton's second law of motion
by-heart ಮಾಡ್ತಾ ಇದ್ರೆ
ಇನ್ನೊಬ್ಬಳು "......ಬ್ರಿಟಿಷರು ದೇಶ
ಬಿಟ್ಟು ಹೋದರು"
ಅಂತ NCERT History text book ಓದ್ತಾ ಇರ್ತಾಳೆ.
ಒಂಟಿ ಯುವತಿ
ಒಬ್ಬಳು ತನ್ನ
smartphone scroll ಮಾಡ್ತಾ ಇದ್ರೆ
ಏಕಾಂಗಿ ಯುವಕ
ಕೆಲಸಕ್ಕೆನು ಮಾಡಲಿ ಅಂತ
ಯೋಚನೆ ಮಾಡ್ತಾ
ಇರ್ತಾನೆ. ಒಂದೆರಡು
ವರ್ಷದಲ್ಲಿ "ಗಂಡನ ಮನೆ"
ಅನ್ನೋ ಜೈಲಿಗೆ
ಕಳಿಸಿ ನಮ್ಮ
ಸ್ವತಂತ್ರ ಹಾಗೂ
ಬಹುಮುಖ್ಯವಾಗಿ ಸ್ವ
ಇಚ್ಚೆಯನ್ನು ಕಸಿದುಕೊಳ್ಳುತ್ತಾರೆ ಅನ್ನೋ ಮನಸ್ಥಿತಿಯಲ್ಲಿರುವ ನಾಲ್ಕೈದು ಹುಡುಗಿಯರ
ಗರ್ಲ್ಸ್ ಗ್ಯಾಂಗ್
ಈಗ ಸಿಕ್ಕಿರುವ
ಸ್ವಾತಂತ್ರ ಸ್ವಇಚ್ಛೆ ಸವಲತ್ತು
ಸೌಲಭ್ಯ ಸೌಭಾಗ್ಯ
ಇತ್ಯಾದಿ ಇತ್ಯಾದಿಗಳನ್ನೆಲ್ಲ completely utilize ಮಾಡ್ಕೊಂಡು
ಕಣ್ಣಿಗೆ ಕಾಜಲ್
ತುಟಿಗೆ ರಂಗಿಬಿರಂಗಿ
ಲಿಪ್ಸ್ಟಿಕ್ ಉಗುರಿಗೆ
ನೇಲ್ ಪಾಲಿಶ್
ಮೈಮೇಲೆ ಟೈಟ್
ಸ್ಲೀವ್ಲೆಸ್ ಟಿ-ಶರ್ಟ್ ಹರ್ದಿರೋ
ಜೀನ್ಸ್ ಪ್ಯಾಂಟು
ಕೈಯಲ್ಲಿ ಮೊಬೈಲ್
ಅದರಲ್ಲಿ ಅದ್ಯಾವ್ದೋ
ಕಿತ್ತೋಗಿರೋ ಇಂಗ್ಲಿಷ್
ಹಾಡು. ಜೊತೆಗೆ
ಕಿಲಕಿಲ ಅಂತ
ನಗೋದೇನು, ಕೇಕೇ
ಹಾಕೋದೇನು. ಹೆಸರಿಗೆ
ಸಂಸ್ಕೃತಿ ಶರ್ಮ,
ಕೈಯಲ್ಲಿ ಬಳೆ
ಇಲ್ಲ ಹಣೇಲಿ
ಕುಂಕುಮ ಇಲ್ಲ.
ನನ್ನಂಥವನು ಮೈ
ಪರ್ಚ್ಕೊಳೊದೊಂದು ಬಾಕಿ.
ಇನ್ನು ಎರಡು
ಮೂರು ತಲೆಮಾರುಗಳಿಂದ
ಇಲ್ಲೇ ವ್ಯಾಪಾರ
ಮಾಡಿಕೊಂಡು ಎರಡು
ಗಾಡಿ ನಾಲ್ಕು
ಮಕ್ಕಳು ಮಾಡಿಕೊಂಡಿರುವ
ಬಿಸಿನೆಸ್ ಮ್ಯಾನ್
(ಯಾರೋ ಗುಜರಾತಿಯೊ
ರಾಜಸ್ಥಾನಿಯೊ) ಫೋನಿನಲ್ಲಿ
ಹಿಂದಿಯಲ್ಲೊ ರಾಜಸ್ಥಾನಿಯಲ್ಲೊ
ವ್ಯವಹಾರ ಮಾತಾಡ್ತಾ
ಇರ್ತಾನೆ.
"ರೈಲು ಈಗ
ಯಾವುದೋ ಒಂದು
ನಿಲ್ದಾಣಕ್ಕೆ ಬಂದು
ಸೇರಲಿದೆ. ಬಾಗಿಲುಗಳು
ಬಲಕ್ಕೋ ಎಡಕ್ಕೋ
ತೆರೆಯಲಿದೆ" ಅನ್ನೋ ಸಾಲುಗಳು
ಕಿವಿಗೆ ಬಿದ್ದ
ಎರಡು ನಿಮಿಷದಲ್ಲಿ
ಇವೆಲ್ಲ ದೃಶ್ಯಗಳು
ಬದಲಾಗುತ್ತವೆ. ಇಲ್ಲಿರೊ
ಅರ್ಧಕ್ಕೆ ಅರ್ಧದಷ್ಟು
character ಗಳು ಖಾಲಿಯಾಗ್ತಾವೆ. ಬುರ್ಖಾ ಹಾಕಿರೋ
ಮುಮ್ತಾಜ್ ಅವಳ
ಸಹೇಲಿ ಬುರ್ಖಾ ಇಲ್ಲದ ಸಫಿಯ
ಭಾನು ಎಂಟ್ರಿ
ಕೊಡ್ತಾರೆ. "ಇವೆಲ್ಲಾ ಕ್ಯಾಪಿಟಲಿಸ್ಟ್
ಗಳು ದುಡ್ಡು
ಮಾಡೋಕೆ ಮಾಡಿರೋದು"
ಅಂತ ಗೊಣಗುತ್ತಾ
ಹತ್ತೊ ಕಮಿನಿಸ್ಟ್
ಸೆಲ್ವಂ. "ಈ ಮೆಟ್ರೋ ಸ್ಟೇಷನ್
ಗಳಲ್ಲಿ ಬಾರ್
ಇಡೋಕೆ ಲೈಸನ್ಸ್
ಸಿಕ್ಕಿದರೆ ಲಾಭನೊ
ಲಾಭ" ಅಂತ ಸ್ಕೆಚ್ ಹಾಕಿಕೊಂಡು
ಹತ್ತೊ ಕ್ಯಾಪಿಟಲಿಸ್ಟ್
ಡೇವಿಡ್ ಜಾನ್.
ದೇವಸ್ಥಾನಕ್ಕೆ ಹೊರಟಿರುವ
ಸಾವಿತ್ರಮ್ಮ…. ಹೀಗೆ
ಹೊಸ ಹೊಸ
ಮಂದಿ ಪಯಣದಲ್ಲಿ
ಸೇರಿಕೊಳ್ಳುತ್ತಾರೆ.
ಇದುವೇ ನಮ್ಮ
ಮೆಟ್ರೋ….
ನಮಸ್ಕಾರ
ನಿಮ್ಮವ
ಮಹೇಶ್ ಬಿ ಜೋಗಿ
maheshbasavarajujogi@gmail.com
(I'm overwhelmed by your comments to the earlier posts, it means a lot and I appreciate it. There is no way I can know who has commented and I don't get a notification either you my dear reader get the notification of my reply. So it's my humble request to mail me so that we can be in touch.)
👏👏 ಅದ್ಭುತ ಬರವಣಿಗೆ ಮಹೇಶ, ನೀನು ಬಳಸುವ ಪದಗಳ ರೀತಿ imaginationನಲ್ಲಿ ಮುಳುಗಿ ನಾವೆ ಅಲ್ಲಿ ಒಂದು ಕ್ಯಾರೆಕ್ಟರ್ ಸೃಷ್ಟಿ ಮಾಡ್ಕೊಳ್ಳೋ ಅಷ್ಟು ಸೊಗಸು
ReplyDeleteI'm overwhelmed by your words. ಎಲ್ಲವೂ ದೈವ ಕೃಪೆ. ಧನ್ಯವಾದಗಳು 🙏 ಶುಭವಾಗಲಿ ✨
ReplyDelete