ಏನಾಗಲಿ ಮುಂದೆ ಸಾಗು ನೀ
"Life is like riding a bicycle. To keep your balance, you must keep moving."
-Albert Einstein
ಅದು ಒಂದು ಪುಟ್ಟ ಊರು. ಅಲ್ಲಿ ಪ್ರಾಣಿ-ಪಕ್ಷಿಗಳ ಜೊತೆಯಲ್ಲಿ ಲಿಲ್ಲಿ ಪುಟ್ ಮನುಷ್ಯರೂ ಇದ್ದರು. ಒಮ್ಮೆ ಒಂದು ಕಾಲ್ಪನಿಕ ಪ್ರಯೋಗ ನಡೆಯಿತು. ಅಲ್ಲಿ ಎರಡು ಮಂಗಗಳು ಮತ್ತು ಇಬ್ಬರು ಲಿಲ್ಲಿ ಪುಟ್ ಮನುಷ್ಯರು. ಎರಡು ಮಂಗಗಳಿಗೆ ಒಂದು ಮನೆ ಇಬ್ಬರೂ ಪುಟ್ಟ ಮನುಷ್ಯರಿಗೆ ಒಂದು ಮನೆ. ಮನೆಗಳ ಮುಂದೆ ಸರಿಯಾಗಿ ಸಾವಿರ ಕೊಠಡಿಗಳು. ಪ್ರತಿದಿನ ಆ ಸಾವಿರ ಕೊಠಡಿಗಳ ಯಾವುದಾದರೂ ಒಂದು ಕೊಠಡಿಯಲ್ಲಿ ರಾಶಿ ರಾಶಿ ಬಾಳೆಹಣ್ಣುಗಳನ್ನು ಇರಿಸಲಾಗುತ್ತಿತ್ತು. ಈ ನಾಲ್ಕು ಜೀವಿಗಳ ಕೆಲಸ ಇಷ್ಟೇ, ಬಾಳೆಹಣ್ಣುಗಳು ಯಾವ ಕೊಠಡಿಯಲ್ಲಿದೆ ಎಂದು ಪತ್ತೆಹಚ್ಚಿ ಅವುಗಳ ಹೊಟ್ಟೆ ತುಂಬಿಸಿಕೊಳ್ಳಬೇಕು. ಮಂಗಗಳು ಪ್ರತಿದಿನ ಬೆಳಗ್ಗೆ ಏಳುತ್ತಿದ್ದವು, ಎದ್ದ ಕೂಡಲೇ ಬಾಳೆಹಣ್ಣಿನ ತಲಾಶ್ ಗೆ ಹೋಗುತ್ತಿದ್ದೆವು. ಕೆಲವೊಮ್ಮೆ ಬಾಳೆಹಣ್ಣುಗಳು ಬೇಗ ಲಭಿಸಿದರೆ ಒಮ್ಮೊಮ್ಮೆ ತಡವಾಗಿ ಸಿಗುತ್ತಿದ್ದವು. ಇನ್ನೂ ಒಮ್ಮೊಮ್ಮೆ ಸಿಗುತ್ತಲೇ ಇರಲಿಲ್ಲ. ಹೀಗೆ ಸಿಗುತ್ತಿದ್ದ ಬಾಳೆಹಣ್ಣುಗಳನ್ನು ಹೊಟ್ಟೆ ತುಂಬ ತಿಂದು ತಮ್ಮ ಮನೆಗೂ ಕೈಲಾದಷ್ಟು ಕೊಂಡೊಯ್ಯುತ್ತಿದ್ದವು. ಬೇಗ ಸಿಕ್ಕಿದ ದಿನ ತಮ್ಮ ಹೊಟ್ಟೆಗಳನ್ನು ಬೇಗ ಭರ್ತಿ ಮಾಡಿಕೊಂಡು ಮನೆಗಳಿಗೆ ಒಂದಿಷ್ಟು ಬಾಳೆಹಣ್ಣುಗಳನ್ನು ಹಾಕಿ ಉಳಿದ ಸಮಯವನ್ನು ಎಂಜಾಯ್ ಮಾಡುತ್ತಿದ್ದವು. ತಡವಾಗಿ ಸಿಗುತ್ತಿದ್ ದಿನ ಪಾಪ ಹುಡುಕಿ ಹುಡುಕಿ ಸುಸ್ತಾಗಿರುತಿತ್ತು. ಒಂದಿಷ್ಟು ಬಾಳೆಹಣ್ಣುಗಳನ್ನು ತಿಂದು ಒಂದಿಷ್ಟು ಮನೆಗೆ ಒಯ್ದು ಕಣ್ಮುಚ್ಚಿ ನಿದ್ರಿಸುತ್ತಿದ್ದವು. ಇನ್ನು ಎಷ್ಟು ಹುಡುಕಿದರೂ ಬಾಳೆಹಣ್ಣೆ ಸಿಗದ ದಿನ ಮನೆಯಲ್ಲಿರಿಸಿದ್ದ ಬಾಳೆಹಣ್ಣುಗಳನ್ನೇ ತಿಂದು ಮಲಗುತ್ತಿದ್ದೆವು. ಮಂಗಗಳ ದಿನಚರಿ ಹೀಗೆ ಸಾಗಿತ್ತು.
ಆದರೆ ಇತ್ತ ಲಿಲ್ಲಿಪುಟ್ ಮನುಷ್ಯರ ದಿನಚರಿ ಮಾತ್ರ ಹೀಗಿರಲಿಲ್ಲ. ಒಂದಿಷ್ಟು ದಿನ ಮಂಗಗಳಂತೆ ಪುಟ್ಟ ಮನುಷ್ಯರು ದಿನ ಬೆಳಗ್ಗೆ ಏಳೊದು ಬಾಳೆಹಣ್ಣು ಹುಡುಕೋದು ಮಾಡಿದರು. ಆದರೆ ಈ ಮನುಷ್ಯ ಜಾತಿನೇ ಹಾಗೆ ಅನ್ಸುತ್ತೆ. ಒಂದು ದಿನ ಈ ಲಿಲ್ಲಿಪುಟ್ ಗಳು ಮಾತಾಡಿಕೊಂಡು ಆ ದಿನ ಸಿಕ್ಕಿದ ಬಾಳೆಹಣ್ಣಿನ ಕೊಠಡಿಯಿಂದ ಹೊರಗೆ ಬರಲೇ ಇಲ್ಲ. ಮಂಗಗಳು ಅವುಗಳ ಪಾಡಿಗೆ ಅವು ಬಂದು ಬಾಳೆಹಣ್ಣುಗಳನ್ನು ತಿಂದು ಒಂದಿಷ್ಟು ಕೊಂಡೊಯ್ದವು. ಆದರೆ ಈ ಮನುಷ್ಯರು ಮಾತ್ರ ಬಾಳೆಹಣ್ಣುಗಳನ್ನು ಮಾರಲು ಶುರುಮಾಡಿದರು. ಹೀಗೆ ಒಂದು ಹತ್ತು ದಿನ ಕಳೆದಿರಬಹುದು, ಬಾಳೆಹಣ್ಣಿನ ಅರ್ಧದಷ್ಟು ರಾಶಿಯ ಮಾರಾಟವಾಗಿ ಖಾಲಿಯಾಗಿತ್ತು. ಉಳಿದರ್ಧ ಕೊಳೆಯಲು ಶುರುವಾಗಿತ್ತು. ಇದು ಮನುಷ್ಯರ ತಲೆ ಕೆಡಿಸಿತ್ತು. "ಯಾರೋ ನಮ್ಮ ಬಾಳೆಹಣ್ಣುಗಳನ್ನು ಕಳತನ ಮಾಡುತ್ತಿದ್ದಾರೆ" ಎಂದು ಇಲ್ಲದ ಆರೋಪಗಳನ್ನು ಮಾಡಲಾರಂಭಿಸಿದರು. ಇನ್ನೂ ಮುಂದಕ್ಕೆ ಹೋಗಿ "ಯಾರೋ ನಮ್ಮ ಏಳಿಗೆ ಕಂಡು ಆಗದವರು ನಮ್ಮ ಬಾಳೆಹಣ್ಣುಗಳನ್ನು ಕೊಳೆಸುತ್ತಿದ್ದಾರೆ" ಎಂದರು. ಹೀಗೆ ಅದು-ಇದು ಎಂದು ಗೊಣಗುತ್ತ ಅದೇ ಕೊಠಡಿಯಲ್ಲಿ ಉಳಿದುಬಿಟ್ಟರು ಆ ಮನುಷ್ಯರು. ಇತ್ತ ಆ ಮಂಗಗಳ ದಿನಚರಿ ಮಾತ್ರ ಬದಲಾಗಲಿಲ್ಲ. ಎಂದಿನಂತೆ ತಮ್ಮ ತಮ್ಮ ಬಾಳೆಹಣ್ಣಿನ ಹುಡುಕಾಟ ಮಾಡುತ್ತಿದ್ದೆವು, ತಿನ್ನುತ್ತಿದ್ದವು, ಮಲಗುತ್ತಿದ್ದೆವು. ಆದರೆ ಈ ಮನುಷ್ಯರು ಮಾತ್ರ ಮತ್ತೆ ಹುಡುಕಾಟಕ್ಕೆ ಬರಲೇ ಇಲ್ಲ. ಆ ಕೊಠಡಿಗಳಲ್ಲಿ "ಯಾರೋ ನಮಗೆ ಬೇಕು ಅಂತಲೇ ಹೀಗೆ ಮಾಡಿದ್ದಾರೆ" ಎನ್ನುತ್ತಲೇ ಕೊನೆ ಉಸಿರೆಳೆದರು.
ಪಾಠ: ನಮ್ಮ ಜೀವನದಲ್ಲಿಯೂ ಅಷ್ಟೇ, ನಾವುಗಳು ಅತಿ ಬುದ್ಧಿವಂತಿಕೆ ತೋರಿಸಿ ಏನೇನೋ ಮಾಡಲು ಹೋಗಿ ಮಾಡಬೇಕಾಗಿರುವುದನ್ನೇ ಮಾಡದೆ ಅದನ್ನು ಮರೆತುಬಿಡುತ್ತೇವೆ. ಕೆಲವರಂತೂ ನಿಂತಲ್ಲೆ ನಿಂತು ಬಿಡುತ್ತಾರೆ. ಯಶಸ್ಸು ಸಿಕ್ಕರು ಅದರಲ್ಲೇ ಇದ್ದುಬಿಡುತ್ತಾರೆ, ಸೋಲು ಎದುರಾದರೂ ಅದರಲ್ಲಿ ಮುಳುಗಿರುತ್ತಾರೆ. ಮುಂದೆ ನಡೆಯಬೇಕು, ಓಡಬೇಕು ಎನ್ನುವ ಯೋಚನೆಯನ್ನೂ ಮಾಡದೆ ಅದೇ ಗುಂಗಿನಲ್ಲಿರುತ್ತಾರೆ. ಅಂತಹ ಜನರಿಗೆ ತಿಳಿವಳಿಕೆ ಹೇಳೋದು ಬಿಡೋದು ಒಂದೇ ಅನ್ಸುತ್ತೆ.
ಒಂದು ವಿಷಯ ನನ್ನ ಓದುಗ ಮಿತ್ರರೇ, ಬಹಳ ಬಹಳ ಸರಳವಾಗಿ ಹೇಳಬೇಕೆಂದರೆ Whatever happens in your life, Just move on. Chill! ಏನಾಗಲಿ ಮುಂದೆ ಸಾಗು ನೀ.
ಕಥೆಗಳು ಬಾಯಿಂದ ಬಾಯಿಗೆ ಹರಿದು ಬಂದಾಗ ಅದೆಷ್ಟೋ ಹೊಸ ರೂಪವನ್ನು ಕಂಡಿರುತ್ತದೆ. ಅಂತೆಯೇ "Who moved my cheese" ಪುಸ್ತಕದ ಕಥೆಯನ್ನು ಬೇರೆಯದೇ ರೀತಿಯಲ್ಲಿ ಹೇಳಿದ ಸ್ನೇಹಿತ ಪ್ರಜ್ವಲ್ ಚಕ್ರವರ್ತಿಗೆ ಧನ್ಯವಾದಗಳು. ಸ್ನೇಹಿತ ಹೇಳಿದ ಕಥೆಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿ ಬರೆದಿದ್ದೇನೆ. ಒಳ್ಳೆದಾಗಲಿ. ಶಿವನ ಕೃಪೆ ನಮ್ಮ ಮೇಲೆ ಸದಾ ಇರಲಿ.
ಎಂದೆಂದಿಗೂ ನಿಮ್ಮವ
Comments
Post a Comment