ಮಹಾಶ್ವೇತೆ

"ಮಹಾಶ್ವೇತ" ಅನುಪಮಳ ಕಥೆ. ಸುಧಾಮೂರ್ತಿರವರ ಕಾದಂಬರಿಯು ನಮ್ಮನು ನಾಲ್ಕೈದು ದಶಕಗಳ ಹಿಂದಕ್ಕೆ ಕೊಂಡೊಯ್ಯುತ್ತದೆ. ೨೦೦೫ರಲ್ಲಿ ಬಿಡುಗಡೆಯಾದ ಈ ಕಾದಂಬರಿಯು ಆಂಗ್ಲ ಭಾಷೆಯಲ್ಲಿ "ಮಹಾಶ್ವೇತ" ಹಾಗೂ ಕನ್ನಡದಲ್ಲಿ "ಮಹಾಶ್ವೇತೆ". ಒಂದು ಹೆಣ್ಣು ಸಮಾಜದಲ್ಲಿ ಏನೆಲ್ಲಾ ಎದುರಿಸಬೇಕಾಗುತ್ತದೆ ಹಾಗೂ ಆಕೆ ತನ್ನ ದಾರಿಯಲ್ಲಿ ಬಂದ ಕಷ್ಟಕಾರ್ಪಣ್ಯಗಳನ್ನು ಹೇಗೆ ಮೆಟ್ಟಿ ನಿಲ್ಲುತ್ತಾಳೆ ಎನ್ನುವುದೇ ಈ ಕೃತಿಯ ಸಾರ. ಕಥಾ ನಾಯಕಿ ಅನುಪಮ ಬಡ ಮೇಷ್ಟ್ರಿನ ಹಿರಿಯ ಮಗಳು. ತಾಯಿಯನ್ನು ಹಸುಳೆ ಆಗಿದ್ದಾಗಲೇ ಕಳೆದುಕೊಂಡ ಅನು ಅಜ್ಜಿಯ ಮಡಿಲಿನಲ್ಲಿ ಕೆಲಸಮಯ ಬೆಳೆಯುತ್ತಾಳೆ. ಆದರೆ ಅಜ್ಜಿಯು ಅಸುನೀಗಿದ ಬಳಿಕ ಅನಿವಾರ್ಯವಾಗಿ ಮಲತಾಯಿಯನ್ನು ಕಂಡ ಕಥಾನಾಯಕಿ ಅನು ತನ್ನ ಮಲತಾಯಿಯ ಹಿಡಿತದಲ್ಲಿಯೇ ತನ್ನ ಎರಡು ಸಹೋದರಿಯರ (ಮಲ ತಾಯಿಯ ಮಕ್ಕಳು) ಜೊತೆ ಬೆಳೆಯುತ್ತಾಳೆ. ಓದಿನಲ್ಲಿ ಸದಾ ಚುರುಕಾಗಿದ್ದ ಅನು ಮಲತಾಯಿಯ ಮುಳ್ಳಿನ ಹಿಡಿತದಿಂದ ಪಾರಾಗಲು ಊರಿನ ಉಳ್ಳವರಿ೦ದ ವಿದ್ಯಾರ್ಥಿವೇತನ ರೂಪದಲ್ಲಿ ಧನಸಹಾಯ ಪಡೆದು ತನ್ನ ವಿದ್ಯಾಭ್ಯಾಸಕ್ಕೆ ಊರು ಬಿಟ್ಟು ಪಟ್ಟಣ ಸೇರುತ್ತಾಳೆ. ಎಂ.ಎ ಅಂತಿಮ ಪದವಿ ಪರೀಕ್ಷೆಗೆ ಇನ್ನೇನು ಐದಾರು ತಿಂಗಳಿದೆ ಎನ್ನುವ ಹೊತ್ತಿಗೆ ತನ್ನ ಸೌಂದರ್ಯ ಹಾಗೂ ಸುಂದರ ಅಪ್ರತಿಮ ನಾಟಕ(ಮಹಾಶ್ವೇತಾ ನಾಟಕ) ಕಲೆಯ ಮುಖೇನ ಡಾಕ್ಟರ್ ಆನಂದನಿಗೆ ಪರಿಚಯವಾಗಿ ಇಷ್ಟವೂ ಯಾಗಿಬಿಡುತ್ತಾಳೆ. ಆನಂದ ಆಗರ್ಭ ಶ್ರೀಮಂತರಾಗಿದ್ದ ಕಾರಣ ಮದುವೆಯ ಪ್ರಸ್ತಾಪವನ್ನು ಹೆಣ್ಣಿನ ತಂದೆ ಶಾಮಣ್ಣನವರ ಬಳಿ ಕೆಲವೇ ದಿನಗಳಲ್ಲಿ ಅನುಪಮಳನ್ನು ಕೇಳದೆಯೇ ಇಡಲಾಯಿತು. ಅನುಪಮಳು ಸಹ ಆನಂದನ ಸೌಂದರ್ಯಕ್ಕೆ ಸೋತಿದ್ದಳು. ಆನಂದನಿಗೆ ತಂದೆ ಇರಲಿಲ್ಲ. ತಾಯಿಯೇ ಮನೆಯ ಎಲ್ಲಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಆನಂದನ ತಾಯಿ ರಾಧಕ್ಕಳಿಗೆ ಅನುಪಮಾಳ ಕುಟುಂಬ ಸ್ಥಿತಿಯ ಕಾರಣದಿಂದ ಈ ಸಂಬಂಧ ಕಿಂಚಿತ್ತು ಇಷ್ಟವಿರಲಿಲ್ಲ. ಅನುಪಮಳ ಮಲತಾಯಿ ಸಬ್ಬಕ್ಕಳಿಗೂ ಅಂತಸ್ತಿನ ಅಜಗಜಾಂತರದ ಕಾರಣ ಸಂಬಂಧದ ಕುರಿತು ಆಕ್ಷೇಪ ವಿತ್ತು. ಆದರೂ ರಾಧಕ್ಕ ಮಗನ ಆಸೆ ಎಂದೂ ಹಾಗೂ ಸಬ್ಬಕ್ಕ ಅನುಪಮಾಳ ಮದುವೆಯಾದರೆ ತನ್ನ ಮಕ್ಕಳ ದಾರಿ ಸುಗಮವಾಗುತ್ತದೆ ಎಂದು ಎರಡು ಮನೆಯವರು ಒಪ್ಪಿ ಗಂಡಿನ ಖರ್ಚಿನಲ್ಲೇ ಗಂಡಿನ ಮನೆಯಲ್ಲೇ ಅನುಪಮಾಳ ವಿದ್ಯಾಭ್ಯಾಸವನ್ನು ಅಲ್ಲಿಗೆ ಮೊಟಕುಗೊಳಿಸಿ ಮದುವೆಯೂ ಅದ್ದೂರಿಯಾಗಿ ನೆರವೇರಿತು. ಇತ್ತ ಮದುವೆಯಾಗಿ ಕೆಲವು ದಿನಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆನಂದ ಮುಂಚೆಯೇ ತೀರ್ಮಾನಿಸಿದಂತೆ ವಿದೇಶಕ್ಕೆ ಹಾರಿದ. ಎರಡು ತಿಂಗಳಿದ್ದು ದೀಪಾವಳಿಯ ನಂತರ ಅನುಪಮಳನ್ನು ವಿದೇಶ ಕರೆಸಿಕೊಳ್ಳುವಂತೆ ಮಾತಾಗಿತ್ತು. ದೀಪಾವಳಿಯ ಎರಡು ತಿಂಗಳ ಅಂತರದಲ್ಲಿ ಸೋದರಿಯ ಮದುವೆ ಗುರುತಾಗಿದ್ದು ಮದುವೆಗೆ ಉಳಿದು ಹೋಗುವಂತೆ ತಂದೆ ಶಾಮಣ್ಣ ಹೇಳಿದ್ದರಿಂದ ಅನು ದೀಪಾವಳಿ ನಂತರವೂ ವಿದೇಶಕ್ಕೆ ಹಾರಲಿಲ್ಲ. ದೀಪಾವಳಿಯ ಪೂಜೆಯ ಸಮಯದಲ್ಲಿ ಅನುಳ ಕಾಲಿನ ಮೇಲೆ ಏನೋ ಬಿದ್ದು ಸುಟ್ಟ ಗಾಯವಾಗಿರುತ್ತದೆ. ಈ ವಿಷಯವನ್ನು ತನ್ನಲ್ಲಿಯೇ ಗೌಪ್ಯವಾಗಿರಿಸಿ ತನಗೆ ತೋಚಿದ ಮುಲಾಮು ಹಚ್ಚುತ್ತಾಳೆ. ಕ್ರಮೇಣ ಗಾಯ ವಾಸಿಯಾಗಿ ಆ ಜಾಗದಲ್ಲಿ ಬಿಳಿ ಕಲೆ ಉಳಿಯುತ್ತದೆ. ದಿನಕಳೆದಂತೆ ಬಿಳಿ ಕಲೆಯು ಹೆಚ್ಚುತ್ತಾ ಅನುಪಮಾ ಗಾಬರಿಯಾಗುತ್ತಾಳೆ. ಗೌಪ್ಯವಾಗಿಯೇ ವೈದ್ಯರನ್ನು ಕಂಡಾಗ ತನಗೆ ತೊನ್ನಿನ ಸಮಸ್ಯೆವಿದೆಯಂದು ತಿಳಿಯುತ್ತದೆ. ಈ ವಿಷಯ ರಾಧಾಕ್ಕಳಿಗೆ ತಿಳಿದು ಇಲ್ಲಸಲ್ಲದ ಆರೋಪಗಳನ್ನು ಅನುಪಮಾಳ ಹಾಗೂ ಅವಳ ಕುಟುಂಬದವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರೆಸಿ ಶಾಮಣ್ಣನನ್ನು ಕರೆಸಿ ಅನುಪಮಳನ್ನು ಮನೆಯಿಂದ ಹೊರ ಹಾಕುತ್ತಾಳೆ. ತವರು ಮನೆಯನ್ನು ಸೇರಿದ ಅನುವಿನ ತೊನ್ನಿನ ವಿಚಾರ ಊರಲ್ಲ ಹಬ್ಬಿ ನಾಲ್ಕು ಜನ ನಾನೂರು ಮಾತನಾಡಿದರು. ಇದರಿಂದ ತಂಗಿಯ ಮದುವೆ ಮುರಿದು ಬೀಳುತ್ತದೆ. ರಾಧಕ್ಕ ಆನಂದನಿಗೆ ಮತ್ತೊಂದು ಮದುವೆ ಮಾಡಿಸಲು ಹೊರಟಿದ್ದು ಆನಂದನೂ ಒಪ್ಪಿರುವ ವಿಷಯ ತಿಳಿದು "ಭೂಮಿ ಬಿರುದು ತನ್ನ ನುಂಗಿ ಕೊಳ್ಳಬಾರದೇ"ಎಂದುಕೊಂಡಳು ಅನು. ಮುಂದೆ ಮುಂದಿರುವ ಸಮಸ್ಯೆಗಳನ್ನು ಹೇಗೆ ಎದುರಿಸಿ ಜೀವನ ಸಾಗಿಸುತ್ತಾಳೆ ಎನ್ನುವುದು ಸುಧಾಮೂರ್ತಿ ಅಮ್ಮನ "ಮಹಾಶ್ವೇತಾ".
ಎಂದೆಂದಿಗೂ ನಿಮ್ಮವ
ಮಹೇಶ್ ಬಿ ಜೋಗಿ 

Comments

  1. Nimmalli aa kathe edre share maadi... Chenagi moodibandide nimma vivarane MAHASHWETHA..

    ReplyDelete
  2. ಅದ್ಭುತ ವಿಮರ್ಶೆ ಮಹೇಶ್ ಬಿ👏👏

    ReplyDelete
    Replies
    1. ಧನ್ಯವಾದಗಳು 🙏 Means a lot 😌

      Delete

Post a Comment