ಸುಮ್ಮನಿರು... ಮನಸ್ಸು ಶಾಂತವಾಗುತ್ತೆ...
ನಮಸ್ಕಾರ,
ನೆನ್ನೆ ವಿಶ್ವ ಮಾನಸಿಕ ಆರೋಗ್ಯ ದಿನದಂದು ನನಗೊಂದು ಬುದ್ಧನ ಪ್ರಸಂಗ ನೆನಪಾಗಿತ್ತು. ಅದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ರಾತ್ರಿ ಮಲಗಿ ಬೆಳಗ್ಗೆ ಎದ್ದ ನಂತರ ಅದು ಯಾಕೋ ನೆನ್ನೆ ಹೇಳಿದ ಕಥೆಗೂ ಮಾನಸಿಕ ಆರೋಗ್ಯಕ್ಕೂ ಹೆಚ್ಚಿನ… ಹೆಚ್ಚಿನ ಅನ್ನುವುದಕ್ಕಿಂತ ನೇರ ಸಂಬಂಧ ಇಲ್ಲ ಎಂದು ಅನಿಸಿತು. ಅದರ ಹಿಂದೆಯೇ ಮತ್ತೆರಡು ಕಥೆ ನೆನಪಾಯಿತು. ಒಂದು ಇವತ್ತು ಹೇಳ್ತೇನೆ ಮತ್ತೊಂದು ನಾಳೆ ಹೇಳ್ತೀನಿ.
ಒಂದು ಕಥೆ ಹೀಗಿದೆ… ನೀವೆಲ್ಲ ಕೇಳಿರಬಹುದು. ಮತ್ತೊಮ್ಮೆ ಕೇಳಿ… ಬುದ್ಧನ ಮಾತು ಅದೆಷ್ಟು ಸರಿ ಕೇಳಿದರು ಬೇರೆ ಬೇರೆ ರೀತಿಯಲ್ಲಿ ಅರ್ಥವಾಗಿ ಬೇರೆ ಬೇರೆ ರೀತಿಯಲ್ಲಿ ನಮ್ಮ ಬದುಕನ್ನು ಬೆಳಗುತ್ತದೆ.
ಒಮ್ಮೆ ಬುದ್ಧ ದೇವ ಹಾಗೂ ತನ್ನ ಶಿಷ್ಯ ಬಿಕ್ಕು ಒಮ್ಮೆ ಹೀಗೆ ನಡೆದುಕೊಂಡು ಹೋಗುತ್ತಿದ್ದರು. ಶಿಷ್ಯನ ತಲೆಯಲ್ಲಿ ಬಹಳ ದಿನಗಳಿಂದ ಒಂದು ಗೊಂದಲದ ಪ್ರಶ್ನೆ ಇರುತ್ತದೆ. ಬುದ್ಧದೇವ ಏಕಾಂತದಲ್ಲಿ ಸಿಕ್ಕಿರುವುದು ತನ್ನ ಪುಣ್ಯವೆಂದು ಭಾವಿಸಿ, ತನ್ನ ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮುಂದಾಗುತ್ತಾನೆ. "ಬುದ್ಧದೇವ, ನನ್ನಲ್ಲಿ ಬಹಳ ದಿನಗಳಿಂದ ಉತ್ತರ ಸಿಗದ ಪ್ರಶ್ನೆಯೊಂದಿದೆ. ಅದೇನೆಂದರೆ ಈ ಮನಸ್ಸನ್ನು ಶಾಂತ ಗೊಳಿಸುವುದು ಹೇಗೆ? ಅದೆಷ್ಟೇ ಪ್ರಯತ್ನ ಪಟ್ಟರು ಅದೆಷ್ಟೇ ಅಂತರ್ಮುಖಿಯಾಗಿ ಹೋರಾಡಿದರು ಈ ಮನಸ್ಸನ್ನು ಶಾಂತ ಗೊಳಿಸಲು ಅಸಾಧ್ಯವೆನಿಸುತ್ತದೆ. ದಯಮಾಡಿ ಮನಃಶಾಂತಿಯ ಮಾರ್ಗವನ್ನು ತೋರಿ ನನ್ನನ್ನು ಧನ್ಯನನ್ನಾಗಿ ಮಾಡಬೇಕೆಂದು ಪ್ರಾರ್ಥಿಸುತ್ತೇನೆ" ಎಂದ. ಇದನ್ನು ಆಲಿಸಿದ ಬುದ್ಧದೇವ ಮುಗುಳ್ನಗುತ್ತಾ ಮುಂದೆ ಸಾಗುತ್ತಲೇ ಇರುತ್ತಾನೆ. ಬುದ್ಧನೇ ಹಾಗೆ… ಉತ್ತರವನ್ನು ಸಮಯ ಬಂದಾಗ ಕೊಡುತ್ತಾನೆ ಎಂದು ಗೊತ್ತಿದ್ದ ಶಿಷ್ಯನು ಬುದ್ದನನ್ನು ಅನುಸರಿಸುತ್ತಾ ಹಿಂದೆ ಹಿಂದೆ ಹೆಜ್ಜೆ ಹಾಕುತ್ತಾ ನಡೆದನು. ಹೀಗೆ ಸುಮಾರು ಹೊತ್ತು ನಡೆದ ನಂತರ ಒಂದು ಪುಟ್ಟ ಕೆರೆಯ ಬಳಿ ಇದ್ದ ಒಂದು ದೊಡ್ಡ ಮರದ ಕೆಳಗೆ ವಿಶ್ರಾಂತಿ ಪಡೆಯಲು ಕೊಡುತ್ತಾರೆ. ಒಂದೆರಡು ನಿಮಿಷಗಳು ಕಳೆದ ನಂತರ ಬುದ್ಧದೇವ ಒಂದು ಕಲ್ಲನ್ನು ಕೆರೆಗೆ ಎಸೆದು ಶಿಷ್ಯನಿಗೆ ಕುಡಿಯಲು ಕೆರೆಯಿಂದ ನೀರು ತರಲು ಆದೇಶಿಸುತ್ತಾನೆ. ಶಿಷ್ಯ ಕೆರೆಯಿಂದ ನೀರು ತರಲು ಹೋದಾಗ ಕೆರೆಯ ನೀರು ಮಣ್ಣು ಮಣ್ಣು ಆಗಿದ್ದು ಒಂದೆರಡು ನಿಮಿಷ ಬಿಟ್ಟು ನೀರು ತೆಳುವಾದ ನಂತರ ತರುವುದಾಗಿ ಬುದ್ಧ ದೇವನಿಗೆ ತಿಳಿಸಿದ. ಬುದ್ಧದೇವ ಮುಗುಳ್ನಕ್ಕಿ ಸುಮ್ಮನಾದ. ಒಂದೆರಡು ನಿಮಿಷದ ನಂತರ ಶಿಷ್ಯ ನೀರು ತರಲು ಕೆರೆಯ ಬಳಿ ಹೋದಾಗ ಬುದ್ಧದೇವ ಪುಟ್ಟ ಕಲ್ಲೊಂದನ್ನು ಕೆರೆಗೆ ಮತ್ತೆ ಎಸೆದ. ಶಿಷ್ಯ ಹಿಂದಿರುಗಿದ. ಮತ್ತೆ ಒಂದೆರಡು ನಿಮಿಷ ಬಿಟ್ಟು ಹೋದ. ಆಗ ನೀರು ತೆಳುವಾಗಿತ್ತು. ಬುದ್ದ ಸುಮ್ಮನೆ ಕೂತಿದ್ದ. ಶಿಷ್ಯ ಕುಡಿಯಲು ತೆಳುವಾದ ನೀರನ್ನು ಬೊಗಸೆಯಲ್ಲಿ ತಂದು ಬುದ್ದನಿಗೆ ಅರ್ಪಿಸಿದ. ಬುದ್ಧದೇವ ತನ್ನ ಎಂದಿನ ತೇಜಸ್ಸಿನಲ್ಲಿ ನೀರನ್ನು ಸ್ವೀಕರಿಸಿ ಹೇಳಿದ "ನನ್ನ ಮಗು, ಮನಸ್ಸು ಅಷ್ಟೇ… ನೀನು ಏನೂ ಮಾಡದೆ ಅದನ್ನು ಅನಾವಶ್ಯಕವಾಗಿ ಪದೇ ಪದೇ ಕೆಣಕದೆ ಸುಮ್ಮನೆ ಬಿಟ್ಟರೆ ಅದೇ ತೆಳುವಾಗುತ್ತದೆ. ಅದೇ ಶಾಂತವಾಗುತ್ತದೆ. ಹೋರಾಡಬೇಡ… ವ್ಯರ್ಥ ಪ್ರಯತ್ನ ಪಡಬೇಡ… ಸುಮ್ಮನಿರು. ಮನಸ್ಸು ತನ್ನಷ್ಟಕ್ಕೆ ತಾನೇ ಶಾಂತವಾಗುತ್ತದೆ."
ಶಿಷ್ಯನಿಗೆ ಮನಶಾಂತಿಯ ಮಾರ್ಗ ಸಿಕ್ಕಿತ್ತು. ಕೆರೆಯ ನೀರು ತೆಳುವಾಯಿತು ಶಿಷ್ಯನ ಮನಸ್ಸು ಶಾಂತವಾಯಿತು.
ನಮಸ್ಕಾರ
ಎಂದೆಂದಿಗೂ ನಿಮ್ಮವ
ಮಹೇಶ್ ಬಿ ಜೋಗಿ
Nice story Jogi, ಯಾವಾಗ ನಾವು ಇದನ್ನ ಅಳವಾಡಿಸಿಕೊಂಡಗ ಮಾತ್ರ
ReplyDeleteThank you😁 Tension ಮನಸ್ಸಿಂದ ಹೊರಗೆ ನೆಮ್ಮದಿ ಒಳಗೆ 😌
Deleteಕಥೆ ಚೆನ್ನಾಗಿದೆ ಸಂದೇಶವೂ ಇದೆ
ReplyDeleteಧನ್ಯವಾದಗಳು 🙏
Delete