ಮನಸ್ಥಿತಿ
ದೇವರು ಮನುಷ್ಯನ ಸೃಷ್ಟಿ ಮಾಡ್ತಾನೆ. ಆದರೆ ವ್ಯವಸ್ಥೆ ರಾಕ್ಷಸರನ್ನ…
ಮಫ್ತಿ ಸಿನಿಮಾದ ಸಾಲುಗಳು.
ದೇವರು ಮನುಷ್ಯನ ಸೃಷ್ಟಿ ಮಾಡ್ತಾನೆ-ನಿಜ. ಆದರೆ ವ್ಯವಸ್ಥೆ ರಾಕ್ಷಸರನ್ನ ಸೃಷ್ಟಿ ಮಾಡುತ್ತಾ? ಆದರೆ ನಾಸ್ತಿಕರು "ದೇವರು ಮನುಷ್ಯನ ಸೃಷ್ಟಿ ಮಾಡ್ತಾನೆ" ಎನ್ನುವುದನ್ನು ಒಪ್ಪುವುದಿಲ್ಲ. ಹಾಗಂತ "ದೇವರು ಮನುಷ್ಯನನ್ನು ಸೃಷ್ಟಿ ಮಾಡ್ತಾನಾ?" ಎನ್ನುವ ಪ್ರಶ್ನೆಯನ್ನೂ ಕೇಳುವುದಿಲ್ಲ. ಯಾಕೆಂದರೆ ಅದು ಅವರಿಗೆ pointless. ಅವರಿಗೆ ದೇವರೇ ಇಲ್ಲ. They straight away come to the conclusion "There is no god and therefore creatures are not the creation of God ''. They believe there is no such higher power than that of humans or visible nature. ಆದರೆ, they might easily agree with "ವ್ಯವಸ್ಥೆ ರಾಕ್ಷಸರನ್ನ ಸೃಷ್ಟಿ ಮಾಡುತ್ತೆ".
ಕಾಲಕಳೆದಂತೆ ಮನಸ್ಥಿತಿಗಳು ಬದಲಾದವು. ಕೆಲವು ಬೆಳೆದವು, ಕೆಲವು ಉಳಿದವು, ಕೆಲವು ಅಳಿದವು, ಇನ್ನು ಕೆಲವು ಮಾರ್ಪಾಡಾದವು. Some for good, some for bad. ಆದರೆ ಎಲ್ಲಿ ಯಾರಲ್ಲಿ ಎಷ್ಟು ಯಾಕೆ ಹೇಗಾಯಿತು ಎನ್ನುವ ಪ್ರಶ್ನೆಗಳಿಗೆ "ಇದೇ ಸರಿಯಾದ ಉತ್ತರ" ಎನ್ನುವುದು ಕಷ್ಟ. ನನ್ನ ಪ್ರಕಾರ ಮನಸ್ಥಿತಿ ಒಂದು ಬದಲಾದರೆ ಸಾಕು ಮನುಷ್ಯನ ಹಾವಭಾವ, ನಡತೆ, ಮಾತು-ಕತೆ, ಆಚಾರ-ವಿಚಾರಗಳೂ ಬದಲಾಗುತ್ತವೆ. ಯಾವುದೋ ವೈಯಕ್ತಿಕ ಆಸೆಯಲ್ಲಿ ದೇವರನ್ನು ಪೂಜಿಸುವ ಮನಸ್ಥಿತಿಯಲ್ಲಿ ಮಾಡುವ ಆಚಾರ ವಿಚಾರಕ್ಕೂ ದೇವರ ಮೇಲಿನ ನಿಸ್ವಾರ್ಥ ಪ್ರೀತಿಯ ಭಕ್ತಿಯಲ್ಲಿ ಮಾಡುವ ಆಚಾರ-ವಿಚಾರ ಎಷ್ಟು ಅಜಗಜಾಂತರ ಅಲ್ವೇ?
ಆಹಾರ ಪದ್ಧತಿ
ಊಟದಲ್ಲಿ ರುಚಿ ಕಮ್ಮಿಯಾಗಿದ್ದರೂ ಅಮ್ಮ ಮಾಡಿರುವ ಅಡುಗೆ ಎಂದು "ಊಟ ಚೆನ್ನಾಗಿದೆ" ಎಂದು ತಿನ್ನುವ ಪ್ರೀತಿಯ ಮನಸ್ಥಿತಿಗೂ ಊಟದಲ್ಲಿ ರುಚಿಯೇ ಇಲ್ಲದಿದ್ದರೂ ಹೆಂಡತಿ ತಯಾರಿಸಿರುವ ಅಡುಗೆ ಎಂದು "ಊಟ ಅದ್ಭುತವಾಗಿದೆ" ಎಂದು ತಿನ್ನುವ ಭಯದ ಮನಸ್ಥಿತಿಗೊ ಅಥವಾ ಅಗಾಧ ಪ್ರೀತಿಯ ಮನಸ್ಥಿತಿಗೊ ಎಷ್ಟು ವ್ಯತ್ಯಾಸ ಅಲ್ಲವೇ?
ಒಳ್ಳೆಯ ಡಯಟ್ ನಲ್ಲಿ ಇರಬೇಕು ಇಲ್ಲವಾದರೆ ಸೌಂದರ್ಯ ಹಾಳಾಗುತ್ತೆ ಎನ್ನುವ ಮನಸ್ಥಿತಿಗೂ ಒಳ್ಳೆಯ ಪಥ್ಯದಲ್ಲಿ ಇರಬೇಕು ಆಗ ಆರೋಗ್ಯ ಚೆನ್ನಾಗಿರುತ್ತೆ ಎನ್ನುವ ಮನಸ್ಥಿತಿಗೂ ಎಷ್ಟು ವ್ಯತ್ಯಾಸ.
ಬೀದಿಬದಿಯ ಸ್ಟ್ರೀಟ್ ಫುಡ್ ಗಳು ಒಳ್ಳೆಯದಲ್ಲ ಎನ್ನುವ ನನ್ನ ಒಂದು ಮನಸ್ಸಿಗೂ "ಪಾಪ, ನಾವು ತಿನ್ನದಿದ್ದರೆ ಆ ಬೀದಿಬದಿ ವ್ಯಾಪಾರಿ ಹೇಗೆ ಬದುಕು ಸಾಗಿಸಬೇಕು?" ಎಂದು ಆಗೊಮ್ಮೆ ಈಗೊಮ್ಮೆ ಮನಸ್ಸಿಗೆ ತೃಪ್ತಿಯಾಗುವಷ್ಟು ಹೊಟ್ಟೆ ಬಿರಿಯುವಷ್ಟು ತಿನ್ನೋಣ ಎನ್ನುವ ನನ್ನ ಸಮಾಜವಾದಿ ಮನಸ್ಸಿಗೂ ಎಷ್ಟು ವ್ಯತ್ಯಾಸ.
ಕಲಿಕೆ
"ಒಂದೆರಡು ಮಾರ್ಕ್/ಅಂಕ ಜಾಸ್ತಿ ಬರುತ್ತೆ" ಎಂದು ಮಾರ್ಕ್ಸ್ ಸಿದ್ಧಾಂತ ಗಳಂತಹ ಘನ ವಿಷಯಗಳನ್ನು ಕಲಿಯುವ ಮನಸ್ಥಿತಿಗೂ "ಜೀವನಕ್ಕೆ ಸಮಾಜಕ್ಕೆ ಈ ವಿಷಯಗಳು ಬೇಕೋ ಬೇಡವೋ? ಇದು ಸರಿಯೋ ತಪ್ಪೋ? ಇದು ನಿಜವೋ ಸುಳ್ಳೋ? ಒಮ್ಮೆ ಓದೋಣ ಸಾಧ್ಯವಾದರೆ ಅಧ್ಯಯನ ಮಾಡೋಣ ಆಗ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬಹುದು" ಎಂದು ವಿಷಯಗಳನ್ನು ಕಲಿಯುವ ಮನಸ್ಥಿತಿಗೂ ಎಷ್ಟು ವ್ಯತ್ಯಾಸವಿದೆ ಅಲ್ಲವೇ?
"ಆತ್ಮಶ್ರೀಗಾಗಿ ನಿರಂಕುಶಮತಿ" ಯನ್ನು ನಾಲ್ಕೈದು ಬಾರಿ ಪದೇ ಪದೇ ಓದಿರುವ ನಾನು "ಕುವೆಂಪುರವರ ಆ
ಘನ ವಿಷಯವನ್ನು ಮತ್ತೊಮ್ಮೆ ಮಗದೊಮ್ಮೆ ಓದೋಣ. ಓದಿದ ಪ್ರತಿಬಾರಿಯೂ ವಿಷಯದ ಆಳ ಅರಿವಾಗುತ್ತದೆ." ಎನ್ನುವ ನನ್ನ ಮನಸ್ಸಿಗೂ "ವಿಷಯ Heavy ಇದೆ. ಇದನ್ನು ಓದುವ ಸಾಹಸ ಈಗ ಬೇಕ? ಎಂದು ಪ್ರಶ್ನಿಸುವ ಅದೇ ಮನಸ್ಸಿನಲ್ಲಿ ಎಷ್ಟು ಕಲಿಯುವ ವ್ಯತ್ಯಾಸ.
ಧರ್ಮ
"ಹಿಂದುಗಳು ಸಂಕಷ್ಟದಲ್ಲಿದ್ದಾರೆ. ಹಿಂದುಗಳ ಮೇಲೆ ನಡೆಯಬಾರದು ಅನಾಚಾರಗಳು ನಡೆಯುತ್ತಿವೆ. ಹಾಗಾಗಿ ನಾನು ಹಿಂದು ಧರ್ಮದ ಪ್ರಚಾರ ಮಾಡುತ್ತೇನೆ. ಹಿಂದೂ ಧರ್ಮದ ಆಚಾರ ವಿಚಾರಗಳ ಪಾಲನೆ ಮಾಡುತ್ತೇನೆ." ಎನ್ನುವ ಮನಸ್ಥಿತಿಗೂ "ನಾನೊಬ್ಬ/ಳು ಹಿಂದು. ಇದು ನನ್ನ ಧರ್ಮ. ಹಾಗಾಗಿ ನಾನು ಹಿಂದೂ ಧರ್ಮದ ಅನುಸಾರ ಜೀವನ ನಡೆಸುತ್ತೇನೆ. ನಾನು ಧರ್ಮಮಾರ್ಗದಲ್ಲೇ ನಡೆಯುತ್ತೇನೆ" ಎನ್ನುವ ಮನಸ್ಥಿತಿಗೂ ವ್ಯತ್ಯಾಸ ಇದೆ ಅಲ್ಲವೇ?
"ಈ ಬಡ ಹಸಿದ ಹೊಟ್ಟೆಗೆ ಊಟ ಹಾಕಿ ಕೈಗೆ ಬೈಬಲ್ ಕೊಟ್ಟು ಮತಾಂತರ ಮಾಡೋಣ ರೋಗಿಗಳಿಗೆ ಸೇವೆ ಮಾಡಿ ಹಸಿದ ಬಡವನ ಮುಂದೆ ಬೈಬಲ್ ಮೇಲೆ ಅನ್ನ ವಿಡೋಣ. ಜಗ್ಗೇಶ್ ಇಂದ ಜಾಕೋಬ್, ಜಯಣ್ಣ ನಿಂದ ಜಾನ್ ಆಗಿ ಬದಲಾದರೆ ಕೊರಳಿಗೆ ಶಿಲೆಬೆ, ಒಂದು ಕೈಗೆ ಬೈಬಲ್ ಇನ್ನೊಂದು ಕೈಗೆ ಒಂದಿಷ್ಟು ಅನ್ನ ವಿಡೋಣ. ಇಲ್ಲವಾದರೆ ಬದಲಾಗುವವರೆಗೂ ಹಸಿದ ಹೊಟ್ಟೆ ಮುಂದೆ ಕಾಯೋಣ" ಎನ್ನುವ ಮನಸ್ಥಿತಿಗೂ "ನಾವೆಲ್ಲರೂ ದೇವರ ಮಕ್ಕಳು. ನಾವೆಲ್ಲರೂ ಸಹೋದರ-ಸಹೋದರಿಯರು. ಯಾರು ಹಸಿವಿನಿಂದಿರಬಾರದು. ಯಾರು ರೋಗದಿಂದ ನರಳಬಾರದು. ದೇವರು ತನ್ನ ಎಲ್ಲ ಮಕ್ಕಳನ್ನು ಸಮನಾಗಿ ಪ್ರೀತಿಸುತ್ತಾನೆ" ಎನ್ನುವ ಮನಸ್ಥಿತಿ ಎಷ್ಟು ವ್ಯತ್ಯಾಸ.
ಉಡುಗೆ-ತೊಡುಗೆಗಳು (Irrespective of Gender)
"ನಾಲ್ಕು ಜನ ನನ್ನತ್ತ ನೋಡಿ ಬೆರಗಾಗಲಿ" "ನನ್ನ ದೇಹಸೌಂದರ್ಯ ಜಗಕ್ಕೆಲ್ಲ ಕಾಣಲಿ" ಎಂದು ವಿಕೃತವಾಗಿ ಶೃಂಗಾರಗೊಳ್ಳುವ ಮನಸ್ಥಿತಿಗೂ "ನೋಡುವವರಿಗೆ ಹಿತವಾಗಿದ್ದು ನಾನು ಚೆನ್ನಾಗಿರುವುದು ನನಗೆ ತೃಪ್ತಿ ಸಮಾಧಾನ ಇದ್ದರೆ ಸಾಕು" ಎನ್ನುವ ಮನಸ್ಥಿತಿಗೂ ಎಷ್ಟು ವ್ಯತ್ಯಾಸ.
"ನನ್ನ ಸುಂದರ ಮೈಮಾಟವನ್ನು (ಅವರವರ ದೃಷ್ಟಿಯಲ್ಲಿ) ನೋಡಲಿ" ಎಂದು ಅರೆಬರೆ ಬಟ್ಟೆ ಹಾಕಿಕೊಂಡು ಮೈಯನ್ನು ಸಾರ್ವಜನಿಕ ಪ್ರದರ್ಶನಕ್ಕಿರಿಸುವ ಮನಸ್ಥಿತಿಗೂ "I am comfortable with this outfit" ಎಂದು rightfit and optimal sized clothes ಧರಿಸುವ ಮನಸ್ಥಿತಿಗೂ ಎಷ್ಟು ವ್ಯತ್ಯಾಸ.
"ಮೈ ಮಾನ ಮುಚ್ಚಲು ಯಾವುದಾದರೂ ಒಂದಿಷ್ಟು ಬಟ್ಟೆ ಯಾದರೆ ಸಾಕು" ಎನ್ನುವ ನನ್ನ ಗಾಂಧಿವಾದಿ ಮನಸ್ಸಿಗೂ "ಒಂದೊಮ್ಮೆ ದಾರಿಯಲ್ಲೇನಾದರೂ Andyನೊ, Arianaನೊ ಸಿಕ್ಕಿ ಮಾತಾಡ್ಸಿದ್ರೆ" ಅಂತ heavy ಹಗಲುಗನಸು ಕಾಣುತ್ತಾ… ಫ್ಯಾಶನ್ ಸೆನ್ಸೆ ಇಲ್ಲದೇ ಇರೋದರಲ್ಲೇ ಒಂದಿಷ್ಟು ಬಣ್ಣಬಣ್ಣದ ತೊಡಗೆ ತೊಡು ಎನ್ನುವ ನನ್ನ ಆಶಿಕ್ ಮನಸ್ಸಿಗೂ ಎಷ್ಟು ವ್ಯತ್ಯಾಸ.
ಇಷ್ಟೆಲ್ಲ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ now coming back to "ದೇವರು ಮನುಷ್ಯನ ಸೃಷ್ಟಿ ಮಾಡ್ತಾನೆ ಆದರೆ ವ್ಯವಸ್ಥೆ ರಾಕ್ಷಸರನ್ನ." ದೇವರು ಮನುಷ್ಯನ ಸೃಷ್ಟಿ ಮಾಡ್ದ ನಿಜ. ಆದರೆ ವ್ಯವಸ್ಥೆ ರಾಕ್ಷಸರನ್ನ ಸೃಷ್ಟಿ ಮಾಡುತ್ತೆ ಎನ್ನುವುದು ನನ್ನ ದೃಷ್ಟಿಯಲ್ಲಿ ಅಪೂರ್ಣ ಸತ್ಯ. ಅಂದರೆ ಒಂದು ಭಾಗ ನಿಜ ಒಂದು ಭಾಗ ಸುಳ್ಳು ಒಂದು ಭಾಗ ಗೊತ್ತಿಲ್ಲ. ಸಮಾಜ ಕರಮ್ ಚಂದ್ರ ಮೋಹನ್ ದಾಸ್ ಗಾಂಧಿಯನ್ನೇಕೆ ರಾಕ್ಷಸನಾಗಿ ಮಾಡಲಿಲ್ಲ? ಸಮಾಜ ಭ್ರಷ್ಟ ರಾಜಕಾರಣಿಗಳಿಗೆ, ಭ್ರಷ್ಟ ಅಧಿಕಾರಿಗಳಿಗೆ ಒಟ್ಟಾರೆ ಭ್ರಷ್ಟ ಜನರಿಗೆ ಸಾಕ್ಷಿಯಾಗಿದೆ. ಆದರೆ ಭ್ರಷ್ಟ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು, ಭ್ರಷ್ಟ ನೌಕರರು, ಭ್ರಷ್ಟ ಪ್ರಜೆಗಳು ಸಮಾಜದ ಕೊಡುಗೆ ಎನ್ನುವುದು ಎಷ್ಟು ಸರಿ. ಸಮಾಜ ಇಂತಹ ಭ್ರಷ್ಟ ರಾಕ್ಷಸರನ್ನ ಸೃಷ್ಟಿ ಮಾಡಿದ್ದರೆ ಬುದ್ಧ, ಬಸವಣ್ಣ, ಅಂಬೇಡ್ಕರ್, ಅಬ್ದುಲ್ ಕಲಾಂ ಇವರಲ್ಲ ಇದೇ ಸಮಾಜದವರೇ ತಾನೇ. ಇವರೆಲ್ಲರೂ ಇದೇ ಸಮಾಜದಲ್ಲಿ ಹುಟ್ಟಿ ಬೆಳೆದವರಲ್ಲವೆ? ಸಮಾಜದಲ್ಲಿನ ನೋವು-ಕಷ್ಟಗಳೆಲ್ಲವನ್ನೂ ದಾಟಿ ಬಂದವರೆ ಅಲ್ಲವೇ ಈ ಮಹನೀಯರು. ಹೀಗಿರುವಾಗ ಕಪ್ಪುಚುಕ್ಕಿ ಗಳನ್ನೆಲ್ಲಾ ಸಮಾಜಕ್ಕೆ ಬಳೆಯುವುದೇಕೆ?
ಬೇರೆ ವಿಚಾರಗಳಲ್ಲಿ ಇದು ನನ್ನ ಸ್ವತಂತ್ರ, ಸ್ವ-ಇಚ್ಛ, ನನ್ನ ಆಯ್ಕೆ, ನನ್ನ ವೈಯಕ್ತಿಕ ವಿಷಯ, privacy, ನನ್ನ social life, personal life, ನನ್ನ skills, degree ಅದು ಇದು ಎನ್ನುವ individualಗಳು crime, offence, illegal activitiesಗಳ ವಿಚಾರ ಬಂದಾಗ ಅದರ ಕ್ರೆಡಿಟ್ ಗಳನ್ನೆಲ್ಲಾ ಸಮಾಜಕ್ಕೆ ಕೊಡುವುದೇಕೆ? ಸಮಾಜ ಸರಿ ಇರಲಿಲ್ಲ ಅದಕ್ಕೆ ಅವನು ಪೋಲಿಯಾದ. ಸಮಾಜ ಅವನನ್ನು ಅವನ ಕುಟುಂಬವನ್ನು ಕೆಟ್ಟದಾಗಿ ನಡೆಸಿಕೊಂಡಿತ್ತು ಹಾಗಾಗಿ ಅವನು ಕೊಲೆಗಾರನದ. ಅವಳಿಗೆ ಸಮಾಜ ಸಪೋರ್ಟ್ ಮಾಡಲಿಲ್ಲ ಹಾಗಾಗಿಯೇ ಅವಳು ಕಳ್ಳಿಯಾದಳು ಎಂದು ಹೇಳಿ ಇದಕ್ಕೆಲ್ಲ ಕಾರಣ ಸಮಾಜ ಎನ್ನುವ ಬದಲು ಇದಕ್ಕೆಲ್ಲ ಕಾರಣ ಅವನ ಅಥವಾ ಅವಳ ಮನಸ್ಥಿತಿ ಎನ್ನುವುದು ಹೆಚ್ಚು ಸೂಕ್ತ ಅಲ್ಲವೇ?
Again, ಮನಸ್ಥಿತಿಯ ಮೇಲೆ ಸಮಾಜದ influence ಒಂದು ಮಟ್ಟಕ್ಕೆ ಇರುತ್ತದೆಯೇ ಹೊರತು ಸಂಪೂರ್ಣವಾಗಿಯಲ್ಲ. ಮನಸ್ಥಿತಿ of any individual is designed/ develop/ made of various factors like ನಾವು ಓದುವ ಪುಸ್ತಕಗಳು, ನಾವು ನೋಡುವ ಸಿನಿಮಾ/ನಾಟಕಗಳು, ನಾವು ಮಾಡುವ ಆಲೋಚನೆಗಳು, ನಮ್ಮ ಆಚಾರ-ವಿಚಾರಗಳು, ನಾವು ಮಾಡಿಕೊಳ್ಳುವ ಸ್ನೇಹಿತರು etc etc which are all of our choices. ಇನ್ನೂ ಕೆಲವು factors like ತಂದೆ-ತಾಯಿಯ ಮಾತುಗಳು, ಒಡಹುಟ್ಟಿದವರ ಸಂಬಂಧ, ಶಾಲೆಯಲ್ಲಿ ಮಾಸ್ತರರ ಪಾಠಗಳು (ಜೀವನ ನೀತಿ ಪಾಠಗಳು), ಸಹಪಾಠಿಗಳ ವರ್ತನೆ, ಅಕ್ಕಪಕ್ಕದ ಮನೆಯವರ ನಡತೆಗಳಂತಹವೂ ಸಹ individualನ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಆದರೆ when personal choices are good and strong enough ಈ factorsಗಳ influence ಗಣನೀಯವಾಗಿ ಕಮ್ಮಿ ಇರುತ್ತದೆ.
"Criminals are not born. They are made." ಎನ್ನುವ highly intellectual statementನ ಕೂಡ ನಾನು ಒಂದು ಮಟ್ಟಕ್ಕೆ ಒಪ್ಪುವುದಿಲ್ಲ.
Concluding point: It's all about individuality. ಅದು ಮನುಷ್ಯನ ವೈಯಕ್ತಿಕ ಮನಸ್ಥಿತಿಯ ವಿಚಾರ. ಮನುಷ್ಯತ್ವ, ಸುಗುಣ, ದುರ್ಗುಣ, ರಾಕ್ಷಸತನ, ಒಳ್ಳೆತನ, ಕೆಟ್ಟತನ ಇವೆಲ್ಲವೂ ವೈಯಕ್ತಿಕ ವಿಚಾರ/ಮನಸ್ಥಿತಿಗಳು/ವಿಷಯಗಳು. ಇವುಗಳನ್ನು ಒಂದು ಮಟ್ಟದವರೆಗೂ ಸಮಾಜದ ಜೊತೆ ಜೋಡಿಸಿ ನೋಡಬಹುದು, ಮಾತನಾಡಬಹುದು, ಚರ್ಚಿಸಬಹುದು. ಆದರೆ, at the end of the day, what I feel is ಈ ಎಲ್ಲಾ ಸಂಗತಿಗಳು ಒಂದು ರೇಖೆಯ ನಂತರ ತೀರಾ ವೈಯಕ್ತಿಕ.
ನಮಸ್ಕಾರ
ಎಂದೆಂದಿಗೂ ನಿಮ್ಮವ,
ಮಹೇಶ್ ಬಿ ಜೋಗಿ
ಲೇಖನ ನಿಜಕ್ಕೂ ಚೆನ್ನಾಗಿದೆ ಅದ್ಭುತವಾದ ಪದ ಜೋಡಣೆಗಳು ಮನಸ್ಸನ್ನು ಮುಟ್ಟುತ್ತವೆ ವಿಶ್ಲೇಷಣೆ ಬಹಳ ಚೆನ್ನಾಗಿದೆ ಅಭಿಪ್ರಾಯ ಉನ್ನತ ಮಟ್ಟದಲ್ಲಿದೆ.
ReplyDeleteಧನ್ಯವಾದಗಳು 🙏
Delete