ಸತ್ಯ
"ಸತ್ಯಂ ವದ ಧರ್ಮಂ ಚರ"
ಒಮ್ಮೆ ಸುಳ್ಳು ಸತ್ಯಕ್ಕೆ "ಬಾ ಹೊರಗೆ ಹೋಗಿ ಊರು ಸುತ್ತಿಕೊಂಡು ಬರೋಣ" ಅಂತ ಹೇಳಿತಂತೆ. ಅದಕ್ಕೆ "ಸರಿ" ಅಂದ ಸತ್ಯ ಸುಳ್ಳಿ ನ ಜೊತೆ ಊರು ಸುತ್ತಲೂ ಹೋಯಿತಂತೆ. ಊರು ಸುತ್ತುತ್ತಾ ಸುತ್ತುತ್ತಾ ಒಂದು ಕೊಳದ ಬಳಿ ಬಂದರಂತೆ. ಸತ್ಯಕ್ಕೆ ಊರೆಲ್ಲ ಸುತ್ತಿ ಸುಸ್ತಾಗಿತ್ತಂತೆ. ಅದಕ್ಕೆ ಸುಳ್ಳು "ಸತ್ಯ, ನೀನು ತುಂಬಾ ದಣಿದಿದ್ಯ... ಹೋಗಿ ಕೊಳದಲ್ಲಿ ಸ್ನಾನ ಮಾಡ್ಕೊ... ಆಯಾಸ ಕಮ್ಮಿ ಆಗುತ್ತೆ. ನಾನು ಇಲ್ಲೇ ಕೂತಿರ್ತೀನಿ" ಅಂತ ಸತ್ಯಕ್ಕೆ ಹೇಳಿತಂತೆ. ಅದಕ್ಕೆ "ಸರಿ" ಅಂದ ಸತ್ಯ ತನ್ನ ಬಟ್ಟೆಯನೆಲ್ಲ ಬಿಚ್ಚಿ ದಡದಲ್ಲಿಟ್ಟು ನೀರಿಗಿಳಿದು ಸ್ನಾನ ಮಾಡಲಾರಂಭಿಸಿತ್ತಂತೆ. ಆಗ ಸುಳ್ಳು ದಡದಲ್ಲಿದ್ದ ಸತ್ಯದ ಬಟ್ಟೆಯನ್ನು ಎತ್ತಿಕೊಂಡು ಸ್ನಾನ ಮಾಡುತ್ತಿದ್ದ ಸತ್ಯವನ್ನು ಅಲ್ಲೇ ಬಿಟ್ಟು ಬಂತಂತೆ. ಅತ್ತ ಬಟ್ಟೆ ಇಲ್ಲದೆ ನಗ್ನವಾಗಿದ್ದ ಸತ್ಯ ನೀರಿನಿಂದ ಹೊರಬರಲು ನಾಚಿಕೆಯಿಂದ ಅಂಜಿ ಕೊಳದಿಂದ ಹೊರಬರಲಿಲ್ಲವಂತೆ. ಆ ದಿನದಿಂದ ಸತ್ಯ ಅಲ್ಲೇ ನೀರಿನಲ್ಲಿ ಉಳಿಯುತ್ತಂತೆ ಹಾಗೂ ಅವತ್ತಿನಿಂದ ಸುಳ್ಳು ಸತ್ಯದ ಬಟ್ಟೆ ಧರಿಸಿ ಊರು ತುಂಬಾ ಓಡಾಡುತ್ತಿದೆಯಂತೆ.
ಎಂದೆಂದಿಗೂ ನಿಮ್ಮವ,
ಮಹೇಶ್ ಬಿ ಜೋಗಿ
Comments
Post a Comment