ಎಲ್ಲ ಬಲ್ಲವರಿಲ್ಲವೋ…


ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ|
ಬಲ್ಲಿದರು ಇದ್ದು ಬಲವಿಲ್ಲ, ಸಾಹಿತ್ಯ
ಎಲ್ಲರಿಗೆ ಇಲ್ಲ ಸರ್ವಜ್ಞ||

"ನನಗೆ ಎಲ್ಲ ಗೊತ್ತು" ಅನ್ನುವುದು ಮೂರ್ಖತನ. ಮನುಷ್ಯ ಪ್ರಾಣಿಗೆ ಸ್ವಲ್ಪ ಮೂರ್ಖತನವೇ ಹೆಚ್ಚು. ಹಾಗಾಗಿ ಮನುಷ್ಯ ಪ್ರಾಣಿಯಾಗಿಯೇ ಉಳಿಯುವುದೊ ಅಥವಾ For betterment ಪ್ರಾಣಿಯಾಗೋಕೆ ಪ್ರಯತ್ನಿಸುವುದೊ ಅಂತ ಒಮ್ಮೊಮ್ಮೆ ಆಲೋಚನೆಗಳು ಬರ್ತಾ ಇರ್ತವೆ. ಈ ಆಲೋಚನೆಗಳನ್ನ ಯಾರಿಗಾದರೂ Especially ಮನೆಯವರಿಗೆ ಹೇಳಿದ್ರೆ ನನ್ನ ಆಲೋಚನೆ ಕೇಳಿ ವಿಷಯವನ್ನು ಬಿಟ್ಟು ನನ್ನ ಬಗ್ಗೆ ಯೋಚನೆ ಮಾಡೋಕೆ ಶುರು ಮಾಡ್ತಾರೆ. So, for betterment ಪ್ರಾಣಿ ಆಗೋಕೆ ಪ್ರಯತ್ನಿಸುವ ಮೊದಲು ಕೆಲ ಆಲೋಚನೆಗಳನ್ನು ಅಂತರಂಗದಲ್ಲೇ ಇಟ್ಟುಕೊಂಡು "ಮನುಷ್ಯ ಸಂಘ ಜೀವಿ" ಅನ್ನುವುದನ್ನು ಈ ಕಾಲಕ್ಕೆ In most of the cases, Theoretically ಮಾತ್ರ ಸರಿ ಎಂದು ಒಪ್ಪಿಕೊಂಡು ಜೀವನ ನಡೆಸಬೇಕು ಅನಿಸುತ್ತದೆ. ದೇಶದಲ್ಲಿ ಜೀವನ ನಡೀಬೇಕು ಅಂದ್ರೆ ದೇಹದಲ್ಲಿ ಜೀವ ಇರ್ಬೇಕು. ದೇಹದಿಂದ ಜೀವ ಪಕ್ಷಿ ಹಾರೋಗದೆ ದೇಹದಲ್ಲೇ ಆ ಜೀವ ಪಕ್ಷಿಯೂ ಲವಲವಿಕೆಯಿಂದ(with love) ಹಾಡಾಡಿಕೊಂಡು ಇರಬೇಕು ಅಂದ್ರೆ ದೇಹಕ್ಕೆ ಹಾಗೂ ಒಂದಿಷ್ಟಾದರೂ ನಾಲಿಗೆಗೆ ಹಿತ ಅನಿಸುವ ಆಹಾರ Time timeಗೆ ಮನುಷ್ಯನ ಹೊಟ್ಟೆ ಸೇರ್ತ ಇರಬೇಕು. ಇಲ್ಲ ಅಂದ್ರೆ ಹೆಚ್ಚುಕಮ್ಮಿಗಳಾಗ್ತವೆ…

Time-timeಗೆ ಸರಿಯಾದ ಸಮಯಕ್ಕೆ ತಿನ್ನಲಿಲ್ಲ ಅಂದ್ರೆ ಅದೆಂಥ ಆರೋಗ್ಯವಂತ Good foodನ್ನೇ ತಿಂದ್ರುನು Good life ಸಿಗಲ್ಲ. ಇದರಿಂದ ಗ್ಯಾಸ್ಟ್ರಿಕ್ ಆಗಬಹುದು. ಇನ್ನೂ ಸಮಯಕ್ಕೆ ಸರಿಯಾಗಿ ತಿಂದ್ರು ಜೈಲು ಹಾಸ್ಟೆಲ್ ಗಂಟೆ (ಎರಡು ಒಂದೇ ಬಿಡಿ) ಹೊಡೆದಂಗೆ ಸಮಯಕ್ಕೆ ಸರಿಯಾಗಿ ಅಂತ-ಇಂತ ಅದು-ಇದು junk foods fast foods ಅಂತ ತಿಂದ್ರೆ timeಗೆ ಮುಂಚೆನೇ fastಆಗಿ ಈ ಸುಖ ಜೀವನಕ್ಕೆ full stop ಇಟ್ಟು "ಅಯ್ಯೋ ಕರ್ಮಕಾಂಡ" ಅನ್ನೋ ಜೀವನಕ್ಕೆ welcome drinks ಕೊಡಬೇಕಾಗುತ್ತದೆ. ಯಾಕೆಂದರೆ junk, fast, Street foods for some extent okay. ವಯಸ್ಸಿರುವಾಗ ಅದರ damage ದೇಹದ ಮೇಲೆ ಹಾಗೂ ಒಳಗೆ ಎಷ್ಟಾಗಿದೆ ಅಂತ ಗೊತ್ತಾಗೋದಿಲ್ಲ. ಆದರೆ ವಯಸ್ಸಿದ್ದಾಗಲೇ ಒಂದು peak ಹಂತ ದಾಟಿದ ಮೇಲೆ… ಪಾಪ… ದೇಹನೂ support ಮಾಡಲ್ಲ. So, on time ಸರಿಯಾದ ಆಹಾರ ಸೇವಿಸಿದರೆ… ಗೊತ್ತಲ್ಲ… ನಮ್ಮೊಳಗಿರುವ ಪ್ರಾಣ ಪಕ್ಷಿ ಖುಷಿಖುಷಿಯಾಗಿ ತಿನ್ಕೊಂಡು ಕುಡ್ಕೊಂಡು ಹಾಯಾಗಿ ಒಳ್ಳೊಳ್ಳೆ ಹಾಡುಗಳನ್ನ ಹಾಡುತ್ತಾ(Especially ಹೊಸ ಹೊಸ ಚಿತ್ರಗೀತೆಗಳನ್ನು (for our surprise ಇನ್ನೂ releaseಯೇ ಆಗಿರದ film songsಗಳನ್ನು ಕೂಡ ಹಾಡುತ್ತಾ…(Just Kidding))) ತನ್ನದೇ ಆದ ಹೊಸ ಹೊಸ classical ಸಂಗೀತವನ್ನೂ ಸಂಯೋಜಿಸಿ ಅದಕ್ಕೆ ಇಷ್ಟ ಬಂದಂತೆ ಹಾಡಿಕೊಂಡು ಇರುತ್ತೆ. ಹೀಗೆ ಅದು ಒಳಗೆ chill ಮಾಡಿಕೊಂಡು ಇದ್ದರೆ ನಾವು ಹೊರಗೆ pills ತೊಗೊಳದೆ ನೆಮ್ಮದಿಯಾಗಿ ಇರಬಹುದು.

ಬದಲಾಗಿರುವ ನಮ್ಮ ಜೀವನ ಶೈಲಿಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬದುಕುತ್ತಿದ್ದಾರೆ. ನನಗೆ ಬೆಳಗ್ಗೆ ಆರು ಗಂಟೆ ದಿನದ ಶುಭಾರಂಭವಾದರೆ ಅದೆಷ್ಟೋ ಮಂದಿಗೆ ಬೆಳಗ್ಗೆ ಆರು ಗಂಟೆ ಅಂದ್ರೆ "ಶುಭಂ". Night shift ದುಡಿದು ಸುಖ ನಿದ್ರೆಗಾಗಿ ಹಾಸಿಗೆ ದಿಂಬು ಹಿಡಿಯುತ್ತಾರೆ. ಯಾರೋ ಏಳುವರೆಗೆ ಕಾಫಿ ಬ್ರೆಡ್/ಬಿಸ್ಕೆಟ್ ತಿಂದು walking, exercise, gardening ಮಾಡಿ fresh up ಆಗಿ ಒಂಭತ್ತಕ್ಕೆ ತಿಂಡಿ ಮಾಡಿದರೆ ಇನ್ಯಾರೋ ಒಂಬತ್ತು ಗಂಟೆಗೆ ಎದ್ದು ಹತ್ತಕ್ಕೆ breakfast ಮಾಡ್ತಾರೆ. ನಾನು ಒಂದು ಗಂಟೆಗೆ ಊಟ ಮಾಡಿದ್ರೆ ತುಂಬಾ ಜನ 3 ಗಂಟೆಯನ್ನೇ ಅವರ ಲಂಚ್ ಟೈಮ್ ಮಾಡಿಕೊಂಡಿರುತ್ತಾರೆ. ಇನ್ನು ನಾವು ನೀವು ಸಂಜೆಗೆ ಒಂದು ಸಿಗಾರ್ ರಾತ್ರಿಗೆ ಒಂದೆರಡು ಪೆಗ್ ಹಾಕದೆ ಸಿಂಪಲ್ಲಾಗಿ ಲೈಟಾಗಿ ಏಳುವರೆ ಎಂಟರ ಒಳಗೆ ರಾತ್ರಿ ಊಟ ಮುಗಿಸಿಕೊಂಡರೆ ಕೆಲವರಿಗೆ ರಾತ್ರಿ ಹತ್ತು ಗಂಟೆಗೆ ಪಬ್ಲಿಕ್ ಟಿವಿ ರಂಗಣ್ಣ "All right, ನಾವು ಹೋಗಬರ್ತೀವಿ… Over to ನನ್ನ ಸಹೋದ್ಯೋಗಿ…." ಅಂತ ಹೇಳಿದ ಮೇಲೆಯೇ ತಟ್ಟೆಗೆ ಊಟ ಹಾಕಿಕೊಂಡು ಹೊಟ್ಟೆಗೆ ಊಟ ಕಾಣ್ಸೋದು. ಹೀಗೆ ಊಟದ ಸಮಯದಲ್ಲೇ ಒಬ್ಬರಿಗೊಬ್ಬರ Scheduleನಲ್ಲಿ ವ್ಯತ್ಯಾಸ ಇದೆ ಅಂದಮೇಲೆ ಇನ್ನು ತಿನ್ನೋ ಆಹಾರದಲ್ಲಿ, ಉಡೋ ಬಟ್ಟೆಯಲ್ಲಿ, ಮಾಡೋ ಯೋಚನೆಗಳಲ್ಲಿ ಎಷ್ಟೆಲ್ಲಾ ವ್ಯತ್ಯಾಸಗಳು ಬದಲಾವಣೆಗಳು ಇರಬಹುದು ಅಲ್ವಾ. ಬರೆ ಜನರಿಂದ ಜನಕ್ಕೆ ಜೀವನ ಶೈಲಿ ಬದಲಾಗುತ್ತಾ ಇರೊಲ್ಲ. ನಮ್ಮ ನಮ್ಮ ದಿನನಿತ್ಯದ ನಮ್ಮದೇ ಜೀವನ ಶೈಲಿಯೂ ಬದಲಾಗುತ್ತಾ ಇರುತ್ತೆ. ಒಮ್ಮೊಮ್ಮೆ ನೆನ್ನೆಯ ನಮ್ಮದೇ ಜೀವನ ಶೈಲಿ ಇವತ್ತು ಅಪ್ರಸ್ತುತ ಅನಿಸಿ uncomfortable ಅನಿಸಿ unnecessary ಅಂತ ಭಾಸವಾಗಿ ಬೇರೆಯ ಜೀವನ ಶೈಲಿಯನ್ನು ಆಲಂಗಿಸುತ್ತೇವೆ. Some changes are better and for good and some changes are unfortunately, most of the time unknowingly bad and for the worst. Remember, nobody knows what happens tomorrow. We may die. We may become immortal and for God sake, let's pray it never happens. Time machine might be invented or will it be discovered? We never know, we never know. I wish we never know, I wish we never know.

ಅದೇ ಎಲ್ಲ ಬಲ್ಲವರಿಲ್ಲವೋ….

ಮಹೇಶ್ ಬಿ ಜೋಗಿ

Comments

  1. ಸಣ್ಣ ಕಥೆ ಚೆನ್ನಾಗಿದೆ ಓದಿಸಿಕೊಂಡು ಹೋಗುತ್ತೆ ಕನ್ನಡದಲ್ಲಿ ಶುರು ಮಾಡಿ ಕಥೆಯ ಮಧ್ಯ ಮಧ್ಯ ಇಂಗ್ಲಿಷ್ ವಾಕ್ಯಗಳನ್ನು ಅತಿಯಾಗಿ ಬಳಸಿ ಕಥೆಯ ಕೊನೆಯನ್ನು ಇಂಗ್ಲಿಷ್ ವಾಕ್ಯದಲ್ಲಿ ಮುಗಿಸಿದ್ದೀರಿ.

    ReplyDelete
  2. ಧನ್ಯವಾದಗಳು.‌
    ನನ್ನ Random thoughtsಗಳ blog ಇದು ಹಾಗಾಗಿ ಕನ್ನಡ ಜೊತೆಗೆ ಇಂಗ್ಲಿಷ್ ಸೇರಿದೆ. ಇಂಗ್ಲಿಷ್ ಬಳಕೆ ಸ್ವಲ್ಪ ಜಾಸ್ತಿ ಆಯಿತು ಎಂದು ನನಗೂ ಅನಿಸಿತು. ಕೆಲ ಓದುಗರಿಗೆ ಕಿರಿ ಕಿರಿ ಕೂಡ ಆಗಿರಬಹುದು. ಸಹೃದಯಿಗಳು ದಯವಿಟ್ಟು ಕ್ಷಮಿಸಿ.

    ReplyDelete

Post a Comment