ವಿಜಯ ದಶಮಿ ವಿಶೇಷ ಮಂಗಳವಾರದ ಮಾಹಿತಿ

ಸಹೃದಯಿ ವಿಶಾಲ ಮನಸ್ಸಿನ ಕನ್ನಡಿಗರ ನಾಡ ಹಬ್ಬ ಮೈಸೂರಿನ ವೈಭವದ ದಸರಾ ಮಹೋತ್ಸವದ ಹೆಮ್ಮೆಯ ಶುಭಾಶಯಗಳು

ಈ ವಿಜಯದಶಮಿ ನಮ್ಮೆಲ್ಲರಿಗೂ ವಿಜಯ ತರಲಿ ಎಂದು ಆಶಿಸುತ್ತಾ

ಕನ್ನಡಿಗರನ್ನು ಕನ್ನಡ ನಾಡು-ನುಡಿಯನ್ನು ಕನ್ನಡಿಗರ ಸಂಸ್ಕೃತಿ ಆಸ್ಮಿತೆ ಅಸ್ತಿತ್ವವನ್ನು ಕಾಲಕಾಲಕ್ಕೂ ಕಾಯುತ್ತಾ ಸದಾ ತನ್ನ ಮಕ್ಕಳನ್ನು ಅನುಗ್ರಹಿಸಿ ರಕ್ಷಿಸುವ ಕನ್ನಡ ನಾಡ ತಾಯಿ ಚಾಮುಂಡೇಶ್ವರಿ ತಾಯಿಯನ್ನು ಪ್ರಾರ್ಥಿಸುತ್ತಾ

ಕಾವೇರಮ್ಮ ತುಂಗಭದ್ರೆ ನೇತ್ರಾವತಿ ಹಾಗೂ ಕನ್ನಡ ನಾಡಿನ ಎಲ್ಲಾ ಜೀವನದಿಗಳು ತುಂಬಿ ಹರಿದು ಕನ್ನಡ ನಾಡಿನ ಮಕ್ಕಳನ್ನು ಕನ್ನಡ ನಾಡನ್ನು ಬೆಳಗಿಸಲೆಂದು ಬೇಡುತ್ತಾ

ಈ ದಸರಾ ನಮ್ಮ ಜೀವನದಲ್ಲಿ ರಾವಣನಲ್ಲಿಯೂ ಇದ್ದ ಕೆಲವೊಂದಿಷ್ಟು ಸದ್ಗುಣಗಳನ್ನು ರೂಡಿಸಿಕೊಂಡು ಅದೇ ರಾವಣನಲ್ಲಿದ್ದ ಭಯಂಕರ ದುಷ್ಟ ಬುದ್ಧಿಗಳ ಪ್ರತಿ ರೂಪದಂತಿರುವ ನಮ್ಮೊಳಗಿನ ಅನೇಕ ಕೆಟ್ಟ ಬುದ್ಧಿಗಳನ್ನು ಶ್ರೀರಾಮಚಂದ್ರ ಪ್ರಭುವಿನ ನಾಮಸ್ಮರಣೆ ಮಾಡುತ್ತಾ ದಹಿಸಿ ಒಂದು ಸಾರ್ಥಕವಾದ ಬದುಕನ್ನು ಬಾಳೋಣ

|| ಜೈ ಶ್ರೀ ರಾಮ್ ||

ಒಂದು ಸುಂದರವಾದ 
ನೆಮ್ಮದಿಯ ನಾಳೆಗಳಿಗಾಗಿ 
ಈ ದಿನವೇ ಶುರುವಾಗಲಿ 
ಒಂದು ಪುಟ್ಟ ಹೆಜ್ಜೆ

ನೆಮ್ಮದಿಯ ರಿಟೈರ್ಡ್ ಲೈಫ್ ಯಾರಿಗೆ ತಾನೇ ಬೇಡ ಹೇಳಿ. ಎಲ್ಲರೂ ಒಂದು secured and financially stable retired life ಅನ್ನು ಬಯಸುತ್ತಾರೆ. ನಿಮಗೆ ಅರವತ್ತು ವರ್ಷ ಆದಮೇಲೆ ತಿಂಗಳು ತಿಂಗಳು ಯಾರೋ ಬಂದು ನಿಮಗೆ ಐದಾರು ಸಾವಿರ ರೂಪಾಯಿಗಳನ್ನು ಖರ್ಚಿಗೆ ಅಂತ ಕೊಟ್ಟರೆ ಹೇಗಿರುತ್ತೆ ಹೇಳಿ… ಚೆನ್ನಾಗಿರುತ್ತೆ ಅಲ್ವಾ. ತಿಂಗಳು ತಿಂಗಳು ಆ ಥರ ಯಾರು ಕೊಡ್ತಾರೆ ಅಂತೀರಾ… ಒಬ್ಬರಿದ್ದಾರೆ ರೀ… ಬಹಳ ಒಳ್ಳೆಯವರು. ಅವರಿಗೆ ನಿಮ್ಮ ಕಂಡರೆ ಬಹಳ ಪ್ರೀತಿ, ತುಂಬಾನೇ ಕಾಳಜಿ, ಆದರೆ ಏನು ಮಾಡೋದು ಒಂದು ಸ್ವಲ್ಪ ಎಚ್ಚರಿಸುವ ತನಕ ನಿಮ್ಮ ಕಡೆ ಗಮನ ಕೊಡಲ್ಲ ಅಷ್ಟೇ. ಬೇರೆ ಯಾರು ಅಲ್ಲ ಅದು 'ನೀವೇ'. ಯಾರು ಸಹ ಸುಖ ಸುಮ್ಮನೆ ನಮಗೆ ನಿಮಗೆ ಏನನ್ನು especially ದುಡ್ಡನ್ನು ಕೊಡಲ್ಲ. ಅದು ತಿಂಗಳ ತಿಂಗಳ… no way…chanceಯೇ ಇಲ್ಲ. ಕೊಟ್ಟರೆ ನಾವೇ ನಮಗೆ ಕೊಟ್ಕೋಬೇಕು. 

ಹೌದು, ಕೊಟ್ಟರೆ ನಾವೇ ಕೊಟ್ಕೋಬೇಕು. ಆದರೆ ಹೇಗೆ ಕೊಡುವುದು ಅಂತೀರಾ… ಭವಿಷ್ಯಕ್ಕೆ ಹಾರಿ ಹೋಗಿ ಕೊಡೋಕೆ ನಮ್ಮತ್ರ ಟೈಮ್ ಮಿಷನ್ ಇಲ್ಲ. ಬದಲಿಗೆ ಭವಿಷ್ಯಕ್ಕೆ ಅಂತಲೇ ಕೂಡಿಡಲು ಒಂದು ಯೋಜನೆ ಇದೆ. ಅದೇ ಕೇಂದ್ರ ಸರ್ಕಾರದ "ಅಟಲ್ ಪೆನ್ಷನ್ ಯೋಜನೆ". ನಿಮಗೆ ಅರವತ್ತರ ನಂತರ ಪ್ರತಿ ತಿಂಗಳು ಕನಿಷ್ಠ ಒಂದು ಅಥವಾ ಎರಡು ಅಥವಾ ಮೂರು ಅಥವಾ ನಾಲ್ಕು ಇಲ್ಲ ಐದು ಸಾವಿರ ಬರುವಂತೆ ಹೂಡಿಕೆಯನ್ನು ಅರವತ್ತು ವರ್ಷಗಳ ತನಕ ಮಾಡಬಹುದು. ನಿಮ್ಮ ಬ್ಯಾಂಕಿನ Home branchಗೆ ಹೋಗಿ ಅಟಲ್ ಪೆನ್ಷನ್ ಯೋಜನೆಯ ಅರ್ಜಿಯನ್ನು ತುಂಬಿ ಕೊಟ್ಟರೆ ಸಾಕು. ಯಾವ ದಾಖಲೆಗಳಾಗಲಿ ನಿಮ್ಮ ಸುಂದರ ಮುಖದ ಫೋಟೋಗಳಾಗಲಿ ಬೇಕಿಲ್ಲ… ಯಾಕೆ ಹೇಳಿ… ಅಯ್ಯೋ ಎದ್ನೋ ಬಿದ್ನೋ ಅಂತ deadline dateಕಿಂತ ಮುಂಚಿತವಾಗಿಯೇ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಎಲ್ಲವನ್ನು ಜಮಾನದಲ್ಲೇ link ಮಾಡ್ಸಿದ್ವಿ ಅಲ್ವಾ…ಅದರಲ್ಲೇ ಒಂದು ಹೆಣ್ಣಿಗೊಂದು ಗಂಡು ನೋಡಿ ಶಾಸ್ತ್ರ ಸಂಬಂಧ ಎಲ್ಲವನ್ನು ನೋಡಿ ಮದುವೆಯನ್ನು ಮಾಡಿ ಮುಗಿಸ ಬಿಡಬಹುದು ಅಷ್ಟು ಮಾಹಿತಿ ಇದೆ ಸರ್ಕಾರ ಹಾಗೂ ಬ್ಯಾಂಕಗಳ ಬಳಿ. ಹಾ…ನಿಮ್ಮ ಸಹಿ ಮಾತ್ರ ಅವರ ಬಳಿ ಇದ್ದರೂ ಮತ್ತೊಮ್ಮೆ ಕೇಳುತ್ತಾರೆ ಕೊಟ್ಟು ಬಿಡಿ. ನಂತರದಿಂದ ನಿಮ್ಮ ವಯಸ್ಸಿಗೆ ತಕ್ಕಂತೆ ತಿಂಗಳ ತಿಂಗಳ Automatic ಆಗಿ ನಿಮ್ಮ ಅಕೌಂಟ್ ನಿಂದ ಹಣ deduct ಆಗುತ್ತಾ ಹೋಗುತ್ತೆ. Say ನೀವು ಇಪ್ಪತೈದು ವರ್ಷದವರಾಗಿದ್ದರೆ ತಿಂಗಳಿಗೆ 376 ರೂಪಾಯಿಗಳು ಆಗುತ್ತೆ. ಅದೇ ನೀವೇನಾದರೂ ಮೂವತ್ತೈದು ವರ್ಷದವರಾಗಿದ್ದರೆ 902 ರೂಗಳು ಕಡಿತಗೊಳ್ಳುತ್ತೆ. ಅದೇ ನೀವು 40 ವರ್ಷ ಮೇಲ್ಪಟ್ಟವರಾಗಿದ್ದರೆ sorry ನೀವು ಈ ಯೋಜನೆಗೆ ಅರ್ಹರಲ್ಲ. ಆ… ಹಂಗೆ ನೀವೇನಾದರೂ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ Congrats ನೀವು ಕೂಡ ಈ ಯೋಜನೆಗೆ ಅರ್ಹರಲ್ಲ. ನೀವೇನಿದ್ದರೂ "ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ಯೋಜನೆ"ಗೆ ಮಾತ್ರ ಸೀಮಿತ ಎಂಬುದನ್ನು ಮತ್ತೊಮ್ಮೆ ನೆನಪಿಸಿಕೊಂಡು ಮೋದಿಕೇರ್ ಪಕ್ಕದಲ್ಲಿರುವ ಅಮೂಲ್ ಮಿಲ್ಕ್ ಪಾರ್ಲರ್ ಎದುರುಗಡೆ ಇರುವ "ನಂದಿನಿ" ಮಿಲ್ಕ್ ಪಾರ್ಲರ್ ನಲ್ಲಿ ಒಂದು ತಂಪಾದ ಕುಲ್ಫಿ ಯನ್ನು ತಗೊಂಡು ಚೀಪಿಕೊಂಡು ಮನೆಗೆ ನಡಿರಿ. "ನಂದಿನಿ ಕುಲ್ಫಿ - ಟ್ಯಾಕ್ಸ್ ಕಮ್ಮಿ ಸಿಹಿ ಜಾಸ್ತಿ ವಿಶ್ವಾಸ ಅದಕ್ಕಿಂತ ಜಾಸ್ತಿ". ಇರಲಿ. ನಾನು ಈ ಯೋಜನೆಗೆ ಅರ್ಜಿ ತುಂಬಿಸಿ ಕೊಟ್ಟು ಬರಲು ಹೋಗಿದ್ದಾಗ ಕುತೂಹಲಕ್ಕೆ ಬ್ಯಾಂಕಿನವರ ಹತ್ತಿರ "ಸರ್, ಶಿವಣ್ಣನ ಅಕೌಂಟ್ನಿಂದ ಈ ಯೋಜನೆಗೆ ಎಷ್ಟು ಕಟ್ ಮಾಡ್ಕೋತೀರಾ" ಅಂತ ಕೇಳಿದ್ದಕ್ಕೆ "ಇಲ್ಲ ರೀ… ಅವರಿಗಿನ್ನೂ ಹದಿನಾರು ವರ್ಷ ರನ್ನಿಂಗು ಅದಕ್ಕೆ ಎರಡು ವರ್ಷ ಬಿಟ್ಕೊಂಡು ಬರೋಕೆ ಹೇಳಿದ್ದೀವಿ." ಅಂದ್ರು.

ಹೆಚ್ಚಿನ ಮಾಹಿತಿಗೆ myscheme.gov.inಗೆ ಭೇಟಿ ನೀಡಿ ಅಥವಾ npscra.nsdl.co.inಗೆ ಭೇಟಿ ನೀಡಿ ಇಲ್ಲವೇ ನಿಮ್ಮ ಹತ್ತಿರದ ಬ್ಯಾಂಕಿಗೆ ಭೇಟಿ ನೀಡಿ ವಿಚಾರಿಸಿ. 

ಈ ಯೋಜನೆಯ ಬಗ್ಗೆ ನನಗೆ ತಿಳಿಸಿದ ಚೇತನ್ ಸರ್ ಗೆ ಧನ್ಯವಾದಗಳು ಹಾಗೂ ಇಷ್ಟೊತ್ತು ಓದಿದ ನನ್ನ ಮಿತ್ರರೇ ನಿಮಗೂ ಧನ್ಯವಾದಗಳು.

ನೆಮ್ಮದಿಯ ಬದುಕು ನಮ್ಮದಾಗಲಿ 
ಬಾಳು ಬಂಗಾರವಾಗಲಿ 
ಸಮೃದ್ಧಿ ನೆಮ್ಮದಿ ನಮ್ಮೆಲ್ಲರಿಗೂ ಇರಲಿ

|| ಶಂಭೋ ಶಂಕರ ಹರ ಹರ ಮಹಾದೇವ ||

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಜೈ ಹಿಂದ್ ಜಯ ಭಾರತಿ
ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಇದಾಗಿತ್ತು ಮಂಗಳವಾರದ ಮಾಹಿತಿ 
ನಾನು ಮಹೇಶ್ ಬಿ ಜೋಗಿ 
ಮತ್ತೆ ಸಿಗೋಣ 
ನಮಸ್ಕಾರ

Comments

Post a Comment