ಬುದ್ಧನ ಕಥೆ

ನಡೆದುಕೊಂಡು ಹೋಗುತ್ತಿದ್ದ ಬುದ್ಧ ದೇವನಿಗೆ ಎದುರಾದ ಬ್ರಾಹ್ಮಣರಿಬ್ಬರು ಬುದ್ಧ ದೇವನ ತೇಜಸನ್ನು ಕಂಡು ಬೆರಗಾಗಿ "ಯಾರಪ್ಪ ನೀನು ಇಷ್ಟೊಂದು ತೇಜಸ್ಸಿನಿಂದ ಪ್ರಕಾಶಿಸುತ್ತಿರುವೆ… ನೀನು ದೇವಲೋಕದಿಂದಿಳಿದು ಬಂದಿರುವ ದೇವಪುರುಷನೆ…" ಎಂದು ಕೇಳಲು ಬುದ್ಧದೇವ ಎಂದಿನಂತೆ ತನ್ನ ಸುಂದರವಾದ ಮುಗುಳು ನಗೆ ಬೀರಿ "ಇಲ್ಲ" ಎನ್ನುವಂತೆ ತಲೆಯಾಡಿಸಲು "ಹಾಗಾದರೆ ನೀನು ಯಾರೋ ತಪಸ್ವಿಯೊ ಸಿದ್ದಿಪುರುಷನೊ ಇರಬೇಕು" ಎನ್ನಲು ಮತ್ತದೇ ಸುಂದರವಾದ ಮುಗುಳು ನಗೆ ಬೀರುತ್ತಾ "ಇಲ್ಲ " ಎನ್ನುವಂತೆ ತಲೆಯಾಡಿಸಿದಾಗ ಅವರು "ಹಾಗಾದರೆ ಯಾರಪ್ಪ ನೀನು ಮಹಾಪುರುಷ… ದಯೆ ತೋರಿ ನೀನೇ ತಿಳಿಸು…" ಎಂದಾಗ ಬುದ್ಧ ನುಡಿದನು "ನಾನು ಜಾಗೃತ"

ಗೀತಾ ಜಯಂತಿಯ ಶುಭಾಶಯಗಳು 

ಎಂದೆಂದಿಗೂ ನಿಮ್ಮವ 
ಮಹೇಶ್ ಬಿ ಜೋಗಿ

Comments